Saturday, November 23, 2024
Homeಸುದ್ದಿಗಳುಸಕಲೇಶಪುರಅಲ್ಪಸಂಖ್ಯಾತರ ಮೀಸಲಾತಿ ರದ್ದತಿಗೆ ಫಾರೂಕ್ ಸಕಲೇಶಪುರ ಆಕ್ರೋಶ

ಅಲ್ಪಸಂಖ್ಯಾತರ ಮೀಸಲಾತಿ ರದ್ದತಿಗೆ ಫಾರೂಕ್ ಸಕಲೇಶಪುರ ಆಕ್ರೋಶ

ಸಕಲೇಶಪುರ: ಅಲ್ಪಸಂಖ್ಯಾತರ ವಿರೋಧಿ ಸರ್ಕಾರ ಮತ್ತೊಮ್ಮೆ ಅಲ್ಪಸಂಖ್ಯಾತರ ಸರ್ಕಾರಿ ಹಾಗೂ ರಾಜಕೀಯ ಮೀಸಲಾತಿಯನ್ನು ರದ್ದುಗೊಳಿಸಿ ಬ್ರಾಹ್ಮಣ, ಜೈನ, ಆರ್ಯ ವೈಶ್ಯ, ಮೊದಲಿಯಾರ್, ಸಮುದಾಯದ ಜೊತೆ ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಸೇರಿಸಿ 10% ಮೀಸಲಾತಿ ನೀಡಿ ಸರ್ಕಾರ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಮೊಟಕುಗೊಳಿಸಿ ಮುಸ್ಲಿಂ ಸಮುದಾಯದ ಮೇಲೆ ಸರ್ಕಾರ ಗದಾಪ್ರಹಾರ ಮಾಡಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಫಾರೂಕ್ ಸಕಲೇಶಪುರ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣಾ ದೃಷ್ಟಿಯಿಂದ ಇದು ಭಾವನೆಯನ್ನು ಕೆರಳಿಸಿ ಮತ ಪರಿವರ್ತನೆ ಮಾಡಲು ಹುರಿಗೌಡ ನಂಜೇಗೌಡ ಮಾದರಿಯ ತಂತ್ರವೇ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಲು ಸರಕಾರ ಹುಚ್ಚು ಧೈರ್ಯವನ್ನು ತೋರಿಸುವುದರಿಂದ ಸರ್ಕಾರ ದೊಡ್ಡ ನಷ್ಟವನ್ನು ಅನುಭವಿಸುವ ದಿನ ಸಮೀಪ ಇದೆ ಎಂದು ರಾಜ್ಯ ಸರಕಾರದ ನಿಲುವನ್ನು ಖಂಡಿಸಿದ್ದಾರೆ. ಮುಸ್ಲಿಂ ಸಮುದಾಯದ ಒಗ್ಗಟಿನ ಹಾಗೂ ಹೋರಾಟದ ಕೊರತೆ ಇಂದು ಸಮುದಾಯಕ್ಕೆ ಈ ಪರಿಸ್ಥಿತಿಗೆ ಬರಲು ಕಾರಣ ಎಲ್ಲಾ ಪಕ್ಷದ ಮುಸ್ಲಿಂ ಧಾರ್ಮಿಕ ಮುಖಂಡರು ಉಲಮಗಳು ಈ ಬಗ್ಗೆ ಒಟ್ಟಾಗಿ ಹೋರಾಟ ಮಾಡಲು ಸಜ್ಜಾಗುವಂತೆ ಫಾರೂಕ್ ಸಕಲೇಶಪುರಂ ಸಮುದಾಯದ ಮುಖಂಡರಿಗೆ ಮನವಿ ಮಾಡಿದ್ದಾರೆ.

RELATED ARTICLES
- Advertisment -spot_img

Most Popular