ಕಾಡಾನೆ ದಾಳಿಯಿಂದ ಗಾಯಗೊಂಡಿರುವ ರೈತ ದೇವರಾಜ್ ಸ್ಥಿತಿ ಗಂಭೀರ.
ಆಸ್ಪತ್ರೆಗೆ ತೆರಳದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ.
ಸಕಲೇಶಪುರ :- ಬಾಳ್ಳುಪೇಟೆ ಸಮೀಪದ ನಿಡನೂರು ಗ್ರಾಮದ ರೈತರಾದ ದೇವರಾಜ್ (50) ರವರ ಮೇಲೆ ಕಾಡಾನೆಯೊಂದು ನೆನ್ನೆ ದಾಳಿ ನೆಡೆಸಿತ್ತು.
ದಾಳಿಗೊಳಗಾದ ದೇವರಾಜ್ ರವರನ್ನು ತಕ್ಷಣ ಆಲೂರು ಆಸ್ಪತ್ರೆ ನಂತರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಕಾಡಾನೆಯು ರೈತ ದೇವರಾಜ್ ರವರನ್ನು ತನ್ನ ಸೊಂಡಿಲಿನಿಂದ ಎರಡು ಮೂರು ಬಾರಿ ಎತ್ತಿ ಬಿಸಾಕಿದ್ದರಿಂದ ಪಕ್ಕೆ ಹಾಗೂ ಶ್ವಾಸಕೋಶಕ್ಕೆ ತೊಂದರೆಯಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಜೀವನಮರಣ ನಡುವೆ ಹೋರಾಟ ನೆಡೆಸುತ್ತಿದ್ದಾರೆ.
ಇತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಇದುವರೆಗೂ ಸೌಜನ್ಯಕ್ಕಾದರೂ ಆಸ್ಪತ್ರೆಗೆ ಭೇಟಿ ನೀಡದೆ ಉದಾಸೀನತೆ ತೋರುತ್ತಿದ್ದಾರೆ ಎಂದು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ಶಾಸಕರು ಬೆಂಗಳೂರಿನಲ್ಲೇ ಇದ್ದು ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿಕೊಳ್ಳಬಹುದಿತ್ತು ಆದರೆ ಅ ಕೆಲಸವು ಮಾಡಿಲ್ಲ ಎಂದು ದೂರಿದ್ದಾರೆ m