Monday, November 25, 2024
Homeಸುದ್ದಿಗಳುಫೇಸ್‌ಬುಕ್ ಡಿಪಿ ನೋಡಿ ಮರುಳಾದ ಯುವಕ; ಆಂಟಿಯಿಂದ ಕಳೆದುಕೊಂಡ ಭರ್ತಿ 40 ಲಕ್ಷ ರೂ.! ...

ಫೇಸ್‌ಬುಕ್ ಡಿಪಿ ನೋಡಿ ಮರುಳಾದ ಯುವಕ; ಆಂಟಿಯಿಂದ ಕಳೆದುಕೊಂಡ ಭರ್ತಿ 40 ಲಕ್ಷ ರೂ.! ಹಾಸನ ಮೂಲದ ಮಹಿಳೆಯಿಂದ ವಂಚನೆ : ಬಂಧನಕ್ಕೆ ಬಲೆ ಬೀಸಿದ ಖಾಕಿ 

 ಫೇಸ್‌ಬುಕ್ ಡಿಪಿ ನೋಡಿ ಮರುಳಾದ ಯುವಕ; ಆಂಟಿಯಿಂದ ಕಳೆದುಕೊಂಡ ಭರ್ತಿ 40 ಲಕ್ಷ ರೂ.!

ಹಾಸನ ಮೂಲದ ಮಹಿಳೆಯಿಂದ ವಂಚನೆ : ಬಂಧನಕ್ಕೆ ಬಲೆ ಬೀಸಿದ ಖಾಕಿ

ಇದು ಅಕ್ಷರಶಃ ಆನಲೈನ್‌ನಲ್ಲಿಯೇ ಹುಟ್ಟಿ ಆನಲೈನ್‌ನಲ್ಲಿ ಮುಗಿದು ಹೋದ ಮೋಸದ ಪ್ರೀತಿ. ಜೊತೆ ಉಂಡೂ ಹೋಗಿ ಕೊಂಡೂ ಹೋದ ಮಹಾ ಮೋಸದ ಸ್ಟೋರಿ. ಅಂದಹಾಗೆ ಇದು ನಡೆದದ್ದು ವಿಜಯಪುರ ಜಿಲ್ಲೆಯಲ್ಲಿ. ಅವಳು ಆತನಿಗೆ‌ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ಮಾಯಾಂಗನೆ, ಮೋಸ ಮಾಡಲೇಂದೇ ಫೇಸ್‌ಬುಕ್ ಆರಿಸಿಕೊಂಡಿದ್ದ ಐನಾತಿ ಮಹಿಳೆ.

ಅವಳ ಫೇಸ್‌ಬುಕ್ ಫೋಟೋ ನೋಡಿದ್ರೆ ಎಂತವರಿಗೂ ಒಂದು‌ ಕ್ಷಣ ದಿಗಿಲಾಗುತ್ತೆ. ಅಂತಹ‌ ಮಾದಕತೆಯ ನೋಟ. ಹೀಗಾಗಿ, ಆ ಅಕೌಂಟಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದ್ರೆ ಸಾಕು ಕ್ಷಣಮಾತ್ರದಲ್ಲೇ ಅಕ್ಸೆಪ್ಟ್‌ ಮಾಡಿಕೊಳ್ಳುವ ಆಸೆ ಹುಟ್ಟಿರುತ್ತೆ. ಅಂತಹದ್ದೊಂದು ಮಾಯಾಜಾಲ ಹೆಣೆದಿದ್ದ ಆ ಮಹಿಳೆ ಅನಾಮತ್ತಾಗಿ ಲಕ್ಷ ಲಕ್ಷ ಹಣ ಎಗರಿಸಿದ್ದಾಳೆ. ಆಕೆಯ ಡಿಪಿ ನೋಡಿ ಕ್ಲೀನ್ ಬೋಲ್ಡ್ ಆಗಿದ್ದ ಯುವಕ ಫ್ರೆಂಡ್‌ ರಿಕ್ವೆಸ್ಟ್‌ ಅಕ್ಸೆಪ್ಟ್‌ ಮಾಡಿ ಚಾಟಿಂಗ್ ಮಾಡಲೂ ಆರಂಭಿಸಿದ್ದ. ಬಳಿಕ ಸ್ನೇಹ, ಪ್ರೀತಿ ಅಂತೆಲ್ಲಾ ಶುರುವಾಗಿ ಕೊನೆಗೆ ನಿಂತಿದ್ದು ಮೋಸದಲ್ಲಿ. ಅಂದಹಾಗೆ ಇದು ನಡೆದದ್ದು ವಿಜಯಪುರ ಜಿಲ್ಲೆಯಲ್ಲಿ.

ಅಂದಂತೆ ಫೇಸ್‌ಬುಕ್ ಪ್ರಣಯದ ನಡುವೆ ಮಾದಕ ನೋಟದ ಚೆಲುವೆ ಹೊಸ ಹೊಸ ವರಾತಗಳನ್ನು ಶುರುವಿಟ್ಟಿದ್ದಳು. ತಾನು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ, ಹಣದ ಅವಶ್ಯಕತೆ ಇದೆ, ಮುಂದೆ ನಾನು ಡಿಸಿ ಆಗುವೆ ಎಂದೆಲ್ಲಾ ಹೇಳಿದ್ದಳು. ನಾನು ಡಿಸಿ ಆಗಬೇಕು ಅಂದ್ರೆ ಬರೊಬ್ಬರಿ 40 ಲಕ್ಷ ರೂ. ಹಣ ಬೇಕಾಗುತ್ತದೆ ಅಂತಾ ಹೇಳಿ, ಬಡಪಾಯಿ ಹುಡುಗನಿಂದ ಸುಮಾರು 40 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದಳು.

ಹನಿಟ್ರ್ಯಾಪ್‌ನಿಂದ ಹಣ ವಸೂಲಿ!

ಯುವಕನಿಂದ ಹಣ ಬರುತ್ತೆ ಎಂದು ಗೊತ್ತಾದ ಬಳಿಕ ಹೊಸ ಹೊಸ ಐಡಿಯಾಗಳ‌ ಮೂಲಕ ಹಣ ವಸೂಲಿಗೆ ಮಹಿಳೆ ನಿಂತಿದ್ದಳು. ವಿಡಿಯೋ ಕಾಲ್ ಮಾಡಿ ಯುವಕನ ಬೆತ್ತಲೆ ವಿಡಿಯೋ ಮಾಡಿಕೊಂಡು ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದಳು. ಹಣಕ್ಕಾಗಿ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡೋಕೆ ಶುರು ಮಾಡಿಕೊಂಡಿದ್ದಳು. ಹೀಗಾಗಿ, ಮಹಿಳೆಯ ವಂಚನೆ ಅರಿತ ಯುವಕ ನೇರವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ಈಗ ಮಹಿಳೆ ಪೊಲೀಸರ ಅತಿಥಿಯಾಗಿದ್ದು, ಮಹಿಳೆಗೆ ಆಕೆಯ ಪತಿಯೇ ವಂಚನೆಗೆ ಸಾಥ್‌ ನೀಡಿದ್ದ ಎಂಬುದು ಗಮನಿಸಬೇಕಾದ ಅಂಶ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕ ಪರಶುರಾಮ‌ನ ಕತೆಯಿದು. ಈತ ಹೈದರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದಾನೆ. ಅವನಿಗೆ 30 ಸಾವಿರ ರೂ. ಸಂಬಳ ಬರುತ್ತಿತ್ತು. ಆತ ಮನಸಾರೆ ಪ್ರೀತಿಸುತ್ತಿದ್ದ ಹುಡುಗಿ ಕೇಂದ್ರ ಸರಕಾರದ ಪರೀಕ್ಷೆಗೆ ತಯಾರಿ ನಡೆಸಿದ್ದರಿಂದ ಡಿಸಿ ಆಗುತ್ತಾಳೆ ಎನ್ನುವ ಕನಸು ಕಂಡಿದ್ದ. ಆದರೆ, ಆ ಕನಸು ಬಹುದೊಡ್ಡ ದೋಖಾ ತಂದೊಡ್ಡಿದೆ.

ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದ ಹಾಸನ ಮೂಲದ ಹುಡುಗಿ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕ ಪರಶುರಾಮ ನಡುವೆ ಸಲುಗೆ ಬೆಳೆದಿತ್ತು. ಈ ಸಲುಗೆ ಪ್ರೀತಿಗೆ ತಿರುಗಿತ್ತು. ಇಬ್ಬರೂ ಒಬ್ಬರನೊಬ್ಬರು ನೋಡದೆಯೇ ಮನಸಾರೆ ಪ್ರೀತಿಸುತ್ತಿದ್ದರು. ಅವಳ ಫೇಸ್‌ಬುಕ್‌ ಡಿಪಿ ನೋಡಿ ಮಾರುಹೋಗಿದ್ದ ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ರೂ. ನಗದು ಹಣ, ಒಂದು ಪ್ಲಾಟ್ ಸೇರಿ ಎಲ್ಲವನ್ನು ಮಾರಿ ಹಣ ಕಳಿಸುತ್ತಿದ್ದ. ಆದರೆ, ಸುಮಾರು 40 ಲಕ್ಷ ರೂ.ನಷ್ಟು ‌ಹಣ ಕಳಿಸಿದರೂ ಅವಳಿಗೆ ಆತ ಭೇಟಿ ಮಾತ್ರ ಆಗಿರಲಿಲ್ಲ. ಅದಾದ ಬಳಿಕ ಮತ್ತಷ್ಟು ಹಣಕ್ಕಾಗಿ ಪೀಡಿಸಿದಾಗ ಯುವಕ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ಇನ್ನು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ಎಸ್‌ಪಿ ಆನಂದಕುಮಾರ್‌ ವಿಶೇಷ ತಂಡವೊಂದನ್ನು ರಚಿಸಿ ಆರೋಪಿ ಮಂಜುಳಾಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಾಸರಳ್ಳಿ ಗ್ರಾಮದಿಂದ ಕರೆ ತಂದಿದ್ದಾರೆ. ಪೋಲಿಸರು ಬಂದ ಮಾಹಿತಿ ತಿಳಿದ ಮಂಜುಳಾ ಗಂಡ ಎಸ್ಕೇಪ್ ಆಗಿದ್ದಾನೆ. ಇನ್ನೂ ಈ ಮಂಜುಳಾಗೆ ಮಕ್ಕಳು ಸಹ ಇವೆ. ಮಹಿಳೆ ಮತ್ತು ಫೇಸ್‌ಬುಕ್‌ ಡಿಪಿಗೆ ಅಜಗಜಾಂತರ ವ್ಯತ್ಯಾಸ ಇದೆ. ಇದೇ ರೀತಿ ಬೇರೆ ಯಾರಿಗಾದರು ವಂಚಿಸಿದ್ದಾಳಾ ಎಂಬುದರ ಕುರಿತು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಕಾರು ಖರೀದಿಸಿದ್ದ ಮಹಿಳೆ!

ಫೇಸ್‌ಬುಕ್‌ ಫ್ರೆಂಡ್‌ನಿಂದ ಪಡೆದ ಹಣದಿಂದ ಮಂಜುಳಾ 100 ಗ್ರಾಂ ಬಂಗಾರ, ಒಂದು ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಾಳೆ. ಜೊತೆಗೆ ಊರಲ್ಲಿ ಮನೆಯನ್ನು ಕೂಡಾ ಕಟ್ಟುತ್ತಿದ್ದಾಳೆ. ಇನ್ನೂ ಮಂಜುಳಾ ಈ ಮೋಸದಾಟಕ್ಕೆ‌ ಸಂಪೂರ್ಣವಾಗಿ ಬೆಂಬಲವಾಗಿ ನಿಂತಿದ್ದು ಈಕೆಯ ಗಂಡ, ಸದ್ಯ ಆತ ಕೂಡಾ ತಲೆ ಮರೆಸಿಕೊಂಡಿದ್ದು ಆತನ‌ ಪತ್ತೆಗೆ ಪೋಲಿಸರು‌ ಬಲೆ ಬೀಸಿದ್ದಾರೆ.

RELATED ARTICLES
- Advertisment -spot_img

Most Popular