ಇಂಟರ್ ಸಿಟಿ ರೈಲು ವಿಸ್ತರಿಸಿ : ಹಿತರಕ್ಷಣಾ ಸಮಿತಿಯಿಂದ ಮನವಿ.
ಸಕಲೇಶಪುರ : ಬೆಂಗಳೂರಿನ ಸಂಗೊಳ್ಳಿ ರೈಲು ನಿಲ್ದಾಣದಿಂದ ಹಾಸನಕ್ಕೆ ಬರುತ್ತಿರುವ ಇಂಟರ್ಸಿಟಿ ರೈಲು ರಾತ್ರಿ ವೇಳೆ ಹಾಸನ ರೈಲು ನಿಲ್ದಾಣದಲ್ಲೇ ತಂಗಲಿದೆ ಈ ರೈಲುನ್ನು ಸಕಲೇಶಪುರದವರೆಗೂ ವಿಸ್ತರಣೆ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ ಎಂದು ರೈಲ್ವೆ ಹಿತರಕ್ಷಣ ಸಮಿತಿಯ ಮುಖಂಡರಾದ ನಾರಾಯಣ ಆಳ್ವ ಮನವಿ ಮಾಡಿದ್ದಾರೆ.
ಸಕಲೇಶಪುರದಿಂದ ಮಂಗಳೂರಿಗೆ ತೆರಳುವ ರೈಲು ಮಾರ್ಗ ಗುಡ್ಡಗಾಡು ಪ್ರದೇಶವಾಗಿದ್ದು ಪ್ರತಿ ವರ್ಷ ಗುಡ್ಡ ಕುಸಿತದಿಂದ ರೈಲುಗಳು ತಿಂಗಳುಗಟ್ಟಲೆ ಬಂದ್ ಆಗುತ್ತಿರುತ್ತದೆ. ಅದರಿಂದ ಗುಡ್ಡ ಕುಸಿವ ಆತಂಕವಿರುವ ಸ್ಥಳಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು. ರೈಲು ನಿಲ್ದಾಣಕ್ಕೆ ಬರುವ ರಸ್ತೆ ತೀರಾ ಹದಗೆಟ್ಟಿದೆ ಪ್ರಯಾಣಿಕರು ಓಡಾಡಲು ಅನಾನುಕೂಲವಾಗಿದೆ . ಜೊತೆಗೆ ಇನ್ನಿತರ ಮೂಲಸೌಕರ್ಯಗಳ ಕುರಿತು ಗಮನ ಹರಿಸುವಂತೆ ಶಾಸಕ ಸಿಮೆಂಟ್ ಮಂಜುನಾಥ್ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ರೈಲ್ವೆ ಹಿತರಕ್ಷಣಾ ಸಮಿತಿಯ ದಯಾನಂದ, ಹಾಗೂ ಹಿಂದೂಪುರ ಸಂಘಟನೆಗಳ ಮುಖಂಡ ರಘು ಸಕಲೇಶಪುರ ಸೇರಿದಂತೆ ಮುಂತಾದವರು ಇದ್ದರು.