ಸಕಲೇಶಪುರದ :ಮುಂಬರುವ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನ ಹಿನ್ನೆಲೆಯಲ್ಲಿ ನಡೆದ ಜಾತ್ರೆ ವಸ್ತುಪ್ರದರ್ಶನದ ಬಿಡ್ 25 ಲಕ್ಷದ 42 ಸಾವಿರ ರೂಗಳಿಗೆ ಎಂ.ಎಲ್ ಮೂರ್ತಿ ಎಂಬುವರು ಹರಾಜಿನಲ್ಲಿ ಜಾತ್ರೆ ವಸ್ತಪ್ರದರ್ಶನ ನಡೆಸಲು ಹಕ್ಕು ಪಡೆದರು.
ಬಹಿರಂಗ ಹರಾಜು ನಡೆಯುವ ಮೊದಲು ಕನ್ನಡ ಪರ ಸಂಘಟನೆಗಳ ಮುಖಂಡರುಗಳಾದ ಸಾಗರ್ ಜಾನೆಕೆರೆ, ರಮೇಶ್ ಪೂಜಾರಿ, ನದೀಂ ಮುಂತಾದವರು ಜಾತ್ರೆ ಮೈದಾನದಲ್ಲಿ ಕಸ ವಿಲೇವಾರಿ ಮಾಡದೆ ಹರಾಜು ಮಾಡಬಾರದು ಎಂದು ಆಕ್ರೋಷ ವ್ಯಕ್ತಪಡಿಸಿದರು.ಪೋಲಿಸರು ಪ್ರತಿಭಟನಕಾರರನ್ನು ಹೊರಗೆ ಕಳುಹಿಸಿ ಹರಾಜು ಪ್ರಕ್ರಿಯೆ ಸುಗುಮವಾಗಿ ಆಗುವಂತೆ ನೋಡಿಕೊಂಡರು.
ಈ ಸಂಧರ್ಭದಲ್ಲಿ ಪುರಸಭಾ ಅಧ್ಯಕ್ಷ ಕಾಡಪ್ಪ, ಮುಖ್ಯಾಧಿಕಾರಿ ಮಂಜುನಾಥ್ ಇನ್ನಿತರರು ಹಾಜರಿದ್ದರು.
ತಾಜಾ ಸುದ್ದಿ