Thursday, April 3, 2025
Homeಸುದ್ದಿಗಳುಸಕಲೇಶಪುರಸಕಲೇಶಪುರದಿಂದ ಬೇಲೂರಿಗೆ ಸ್ಥಳಾಂತರಗೊಂಡ ಆನೆ ಕಾರ್ಯಪಡೆ ಕೇಂದ್ರಸ್ಥಾನ

ಸಕಲೇಶಪುರದಿಂದ ಬೇಲೂರಿಗೆ ಸ್ಥಳಾಂತರಗೊಂಡ ಆನೆ ಕಾರ್ಯಪಡೆ ಕೇಂದ್ರಸ್ಥಾನ

ಸಕಲೇಶಪುರದಿಂದ ಬೇಲೂರಿಗೆ ಸ್ಥಳಾಂತರಗೊಂಡ ಆನೆ ಕಾರ್ಯಪಡೆ ಕೇಂದ್ರಸ್ಥಾನ

ಸಕಲೇಶಪುರ : ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರಚಿಸಿದ್ದ ಅರಣ್ಯ ಆನೆ ಕಾರ್ಯಪಡೆ ಕಚೇರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಕಲೇಶಪುರದಿಂದ ಬೇಲೂರು ತಾಲೂಕಿಗೆ ಸ್ಥಳಾಂತರಗೊಳಿಸಿ ಸರ್ಕಾರ ಆದೇಶಿಸಿದೆ.

 ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆ ಸೃಷ್ಟಿಸಿ ಕಚೇರಿಯನ್ನು ಕೆಲ ತಿಂಗಳ ಹಿಂದೆ ಸಕಲೇಶಪುರದಲ್ಲಿ ತೆರೆಯಲಾಗಿತ್ತು. ಆದರೆ ಇದೀಗ ಬೇಲೂರು ತಾಲೂಕಿನಲ್ಲಿ ಕಾಡಾನೆ ಹಾವಳಿ ವಿಪರೀತವಾಗಿರುವುದರಿಂದ ಆನೆ ಕಾರ್ಯಪಡೆಯ ಕೇಂದ್ರ ಸ್ಥಾನವನ್ನು ಬೇಲೂರು ತಾಲೂಕಿಗೆ ಸ್ಥಳಾಂತರ ಗೊಳಿಸಿ ಸರ್ಕಾರ ಆದೇಶಿಸಿದೆ.

 ಇನ್ನು ಮುಂದೆ ಜಿಲ್ಲೆಯ ಆನೆ ಕಾರ್ಯಪಡೆ ಕೇಂದ್ರ ಸ್ಥಾನ ಬೇಲೂರು ಆಗಿರುತ್ತದೆ. ಇನ್ನು ಮುಂದ ಕೇಂದ್ರ ಸ್ಥಾನದಿಂದ

ಜಿ. ಬಿಕ್ಕೋಡಿ ಗ್ರಾಮ, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ ಇಲ್ಲಿ Elephant Task Force Camp ಚಾಲನೆ ಮಾಡತಕ್ಕದ್ದು, ಸದರಿ Camp ಗೆ ಅವಶ್ಯವಿರುವ ಸಿಬ್ಬಂದಿಯನ್ನು DRFO ನೇತೃತ್ವದಲ್ಲಿ ಹಾಲಿ ಇರುವ ಸಿಬ್ಬಂದಿಯನ್ನೇ ನಿಯುಕ್ತಿಗೊಳಿಸತಕ್ಕದ್ದು.

ಸಕಲೇಶಪುರ/ಬೇಲೂರು / ಅರೇಹಳ್ಳಿ ಈ ಮೂರು ಸ್ಥಳಗಳಲ್ಲಿ ಆನೆ / ವನ್ಯಜೀವಿಗಳ ಚಲನವಲನ ಹೆಚ್ಚಾಗಿರುಗುವುದನ್ನು ಗಮನಿಸಿ ಅವಶ್ಯಕತೆಗನುಗುಣವಾಗಿ ಹಾಲಿ ಇರುವ ಸಿಬ್ಬಂದಿಗಳನ್ನೇ ನಿಯುಕ್ತಿಗೊಳಿಸಿ Elephant Task Force Camp ಗಳನ್ನು ಚಾಲನೆಗೊಳಿಸತಕ್ಕದ್ದು.

ಈ ಪ್ರದೇಶಗಳಲ್ಲಿ ಆನೆ ಕಾರ್ಯಪಡ ತಂಡವು ಕಾಡಾನೆ ಹಾವಳಿ ಇರುವ ಪ್ರದೇಶಗಲ್ಲಿ ಗಸ್ತು ತಿರುಗುವುದು ಮತ್ತು ಜನವಸತಿ ಪ್ರದೇಶಗಳಲ್ಲಿ ಮತ್ತು ಕೃಷಿ ಪ್ರದೇಶಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸುವುದು.

ಕಾಡಾನೆ ಹಾವಳಿ ಕಂಡುಬರುವ ಪ್ರದೇಶಗಳ ಹಳ್ಳಿಗಳಲ್ಲಿನ ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದಲ್ಲದೇ ಅರಣ್ಯ ಪ್ರದೇಶದ ಒಳಗೆ ಸಂಚರಿಸದಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಪ್ರಚುರ ಪಡಿಸುವುದು.

ಈ ಕಾರ್ಯಪಡೆಯ ಕೇಂದ್ರಸ್ಥಾನವನ್ನು Control Room (ನಿಯಂತ್ರಣ ಕೊಠಡಿ) ಕಾರ್ಯ ನಿರ್ವಹಿಸತಕ್ಕದ್ದು ಮತ್ತು Control Room ನ ದೂರಿವಾಣಿ ಸಂಖ್ಯೆಯನ್ನು ಸಾರ್ವಜನಿಕರಲ್ಲಿ ಪ್ರಚುರ ಪಡಿಸುವ ಕಾರ್ಯವನ್ನು ನೂತನ ಕಚೇರಿಯಿಂದ ಆರಂಭಿಸಲಾಗುವುದೆಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

RELATED ARTICLES
- Advertisment -spot_img

Most Popular