ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಶಾಸಕ ಎಚ್. ಕೆ ಕುಮಾರಸ್ವಾಮಿಯಿಂದ ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ.
ಸಕಲೇಶಪುರ :- ಸಕಲೇಶಪುರ, ಆಲೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಸರಕಾರ ಶಾಶ್ವತ ಪರಿಹಾರಕ್ಕೆ ಅಗ್ರಹಿಸಿ ಬೆಂಗಳೂರಿನ ವಿಧಾನಸೌಧ ಹಾಗೂ ವಿಕಾಸ ಸೌಧ ದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನೆಡೆಸಿದರು.
ನೆನ್ನೆ ಕೂಡ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆಯಿಂದ ಮನು ಎಂಬ ಯುವಕ ಮೃತ ಪಟ್ಟಿದ್ದನು. ನೆನ್ನೆ ನೆಡೆದ ಪ್ರತಿಭಟನೆ ವೇಳೆ ಶಾಸಕರು ಬುಧುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನೆಡಸುತ್ತೇನೆ ಎಂದು ಹೇಳಿದ್ದರು.ಆಡಿದ ಮಾತನಂತೆ ಶಾಸಕರು ನೆಡೆದುಕೊಂಡಿದ್ದಾರೆ.
ಪ್ರತಿಭಟನೆ ವೇಳೆ ಬೇಲೂರು ಶಾಸಕ ಲಿಂಗೇಶ್, ಅರಕಲಗೂಡು ಶಾಸಕ ಎ. ಟಿ ರಾಮಸ್ವಾಮಿ ಸೇರಿದಂತೆ ಇನ್ನಿತ್ತರರು ಇದ್ದರು



