ಸಕಲೇಶಪುರ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸಡಗರ ಸಂಭ್ರಮದಿಂದ ಆಚರಿಸಿದರು.
ತಾಲೂಕಿನಲ್ಲಿ ಮಳೆ ಬೀಳುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಇಂದು ಬಕ್ರೀದ್ ಹಬ್ಬವನ್ನು ಈಧ್ಗಾಹ್ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸದೆ ತಾಲೂಕಿನಾದ್ಯಂತ ತಮ್ಮ ಮೊಹಲ್ಲಾದ ಮಸೀದಿಗಳಲ್ಲೇ ವಿಶೇಷ ಪ್ರಾರ್ಥನೆ ಸಲ್ಲಿಸಿದರು .
ನಂತರ ನಡೆದ ಪ್ರಾರ್ಥನೆಯಲ್ಲಿ ಭಾರತ ದೇಶದ ಸಮೃದ್ಧಿ, ಪ್ರಗತಿ, ಶಾಂತಿಗಾಗಿ ಅಲ್ಹಾ ನಲ್ಲಿ ಬೇಡಿಕೊಳ್ಳಲಾಯಿತು.
ಬದ್ರಿಯಾ ಜುಮ್ಮಾ ಮಸೀದಿಯ ಖತಿಬರಾದ ಅಬ್ದುಲ್ ರಝಕ್ ಸಖಫಿ ಮಾತನಾಡಿ, ಸಂಪತ್ತು ಮತ್ತು ಸಂತಾನಗಳು ಇಹಲೋಕದ ಅಲಂಕಾರ ಮಾತ್ರವೆಂದೂ, ಅವು ಪರಲೋಕ ಚಿಂತನೆಯಿಂದ ನಿಮ್ಮನ್ನು ತಡೆಯದಿರಲೆಂದೂ ಖುರ್‌ಆನ್ ಎಚ್ಚರಿಕೆ ನೀಡುತ್ತದೆ ಎಂದು ಹೇಳಿದರು. ಅಲ್ಲಾಹನ ತೃಪ್ತಿಗಾಗಿ, ಪರಲೋಕದ ಸದ್ಗತಿಗಾಗಿ ದೇವಾಜ್ಞೆಯೆಂಬ ನೆಲೆಯಲ್ಲಿ ಏಕೈಕ ಪುತ್ರನನ್ನೇ ಬಲಿಯರ್ಪಿಸಲು ಸನ್ನದ್ಧರಾದ ಅವರ ದೇವಭಕ್ತಿ ಮನುಕುಲಕ್ಕೆ ಮಹಾನ್ ಮಾದರಿಯಾಗಿದೆ. ಬಕ್ರೀದ್ ಆಚರಿಸುವ ಭರದಲ್ಲಿ ಅದರ ಹಿನ್ನೆಲೆಯಲ್ಲಿರುವ ಈ ಉದಾತ್ತ ಸಂದೇಶದತ್ತ ಗಮನ ಹರಿಸಲು ಮುಸ್ಲಿಂ ಜಗತ್ತು ಮುಸ್ಲಿಮರು ಮರೆಯಬಾರದು ಹೇಳಿದರು.
ಬಕ್ರೀದ್ ನನ್ನ ಮಾತ್ರ ಉತ್ಸವವಾಗದೆ ನಮ್ಮೆಲ್ಲರ ಸಂತೋಷಾಚರಣೆ ಆಗಬೇಕು ನಮ್ಮಂತೆ ಜೊತೆಗಿರುವವರು ಹೊಸ ಬಟ್ಟೆ ಬರೆಗಳನ್ನಿಟ್ಟು ಸಂಭ್ರಮಿಸಬೇಕು. ಹಬ್ಬ ನಮ್ಮ ಮನೆಗಷ್ಟೇ ಸೀಮಿತವಾಗದೆ ನೆರೆಮನೆಗಳಿಗೆ, ಬಂಧು, ಮಿತ್ರಾದಿಗಳ ಕಡೆಗೆ ಹೋಗಿ ಖುಷಿ ಹಂಚಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ನಾಡ್ ಝಾಕೀರ್, ಯಾದ್ಗಾರ್ ಇಬ್ರಾಹಿಂ, ಜಾಮೀಯಾ ಮತ್ತು ಲಬಾಬೀನ್ ಮಸೀದಿ, ಆಡಳಿತ ಮಂಡಳಿ ಅಧ್ಯಕ್ಷ ಅಮ್ಜದ್ ಹಿಲಾಲ್, ಬದ್ರಿಯಾ ಜುಮ್ಮಾ ಮಸೀದಿಆಡಳಿತ ಮಂಡಳಿ ಅಧ್ಯಕ್ಷ ಯಾದ್ಗಾರ್ ಝಾಕೀರ್, ಸಮಾಜದ ಮುಖಂಡರು, ಸೇರಿದಂತೆ ವಿವಿಧ ಮಸೀದಿಗಳ ಆಡಳಿತ ಮಂಡಳಿ ಸದಸ್ಯರು, ಸಮುದಾಯದವರು ಪಾಲ್ಗೊಂಡು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.