ಸಕಲೇಶಪುರ: ಸರ್ಕಾರಿ ಪ್ರೌಢಶಾಲೆ ಬೆಳಗೋಡು ಶಾಲೆಯಲ್ಲಿ ಸುಮಾರು 60 ರಿಂದ 70 ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲದೆ ಸುಮಾರು 20 ವರ್ಷದಿಂದ ಕೆರೆ ಹಾಗೂ ಬಾವಿ ನೀರನ್ನೇ ಕುಡಿಯಬೇಕಾಗಿದೆ. ಇದರಿಂದಾಗಿ ಶಾಲೆಯ ಮಕ್ಕಳು ದಿನ ನಿತ್ಯ ಒಂದಲ್ಲ ಒಂದು ಆರೋಗ್ಯದಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ.ಜೊತೆಗೆ ಇಲ್ಲೆ ಸಮೀಪದ ಕೂಡನಹಳ್ಳಿ ಗ್ರಾಮದಲ್ಲಿ ಸುಮಾರು 45 ರಿಂದ 50 ಕುಟುಂಬವಿದ್ದು ಅವರಿಗೂ ಕೂಡ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಸರಿ ಇರುವುದಿಲ್ಲ. ಇಲ್ಲಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳಿಗೂ ಮತ್ತು ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ರೀತಿಯಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿಲ್ಲ .ಆದ್ದರಿಂದ ಮುಂದಿನ ದಿನಗಳಲ್ಲಿ ಈ ಒಂದು ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣ ಹೋಬಳಿ ಗೌರವ ಅಧ್ಯಕ್ಷ ಬೆಳಗೋಡು ಬಸವರಾಜ್ ಹೇಳಿಕೆ ನೀಡಿರುತ್ತಾರೆ.