ಸಕಲೇಶಪುರ: ಸೈಬರ್ ಕಾನೂನುಗಳ ಕುರಿತು ಎಂದು ಎಲ್ಲರೂ ಅರಿಯುವ ಅಗತ್ಯವಿದೆ ಎಂದು ವಕೀಲ ಸುದೀಶ್ ಎಸ್ ಪರಮೇಶ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ 76ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಹಾಗೂ ನೆರವು ಶಿಬಿರದಲ್ಲಿ ಸೈಬರ್ ಕಾನೂನು ಕುರಿತು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳ ಹೆಚ್ಚಾಗುತ್ತಿದ್ದು ಹಲವಾರು ಪ್ರಕರಣಗಳಲ್ಲಿ ಅಮಾಯಕರನ್ನು ಬಳಸಿಕೊಳ್ಳಲಾಗುತ್ತದೆ. ಬಹುತೇಕ ಸೈಬರ್ ವಂಚನೆ ಪ್ರಕರಣಗಳಲ್ಲಿ ಅಮಾಯಕರಿಗೆ ಸೈಬರ್ ವಂಚನೆಯಲ್ಲಿ ಒಳಗಾಗಿರುವ ಕುರಿತು ಅರಿವೆ ಇರುವುದಿಲ್ಲ. ಈ. ಹಿನ್ನಲೆಯಲ್ಲಿ ಸೈಬರ್ ವಂಚನೆ ಕುರಿತು ಎಲ್ಲರೂ ಎಚ್ಚರ ಹೊಂದಿರಬೇಕು ಎಂದರು.
ಈ ಸಂದರ್ಭದಲ್ಲಿ ಉದೇವಾರ ಗ್ರಾಮ ಪಂಚಾಯತಿ ಅಧ್ಯಕ್ಷೆ ಮೈತ್ರ, ವಕೀಲರುಗಳಾದ ಧನಂಜಯ, ದಿನೇಶ್ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.