Friday, November 22, 2024
Homeಸುದ್ದಿಗಳುಸಕಲೇಶಪುರದಲಿತ ಸಂಘರ್ಷ ಸಮಿತಿ , ಕರ್ನಾಟಕ (ರಿ) ಜೊತೆ ಜಿಲ್ಲಾಧಿಕಾರಿ ಮಾತು ಕಥೆ: 7 ದಿನಗಳ‌...

ದಲಿತ ಸಂಘರ್ಷ ಸಮಿತಿ , ಕರ್ನಾಟಕ (ರಿ) ಜೊತೆ ಜಿಲ್ಲಾಧಿಕಾರಿ ಮಾತು ಕಥೆ: 7 ದಿನಗಳ‌ ಕಾಲದ ನಿರಂತರ ಧರಣಿ ಸತ್ಯಾಗ್ರಹ ಸೋಮವಾರ ಬಹುತೇಕ ಅಂತ್ಯ

ದಲಿತ ಸಂಘರ್ಷ ಸಮಿತಿ , ಕರ್ನಾಟಕ (ರಿ) ಜೊತೆ ಜಿಲ್ಲಾಧಿಕಾರಿ ಮಾತು ಕಥೆ: 7 ದಿನಗಳ‌ ಕಾಲದ ನಿರಂತರ ಧರಣಿ ಸತ್ಯಾಗ್ರಹ ಸೋಮವಾರ ಬಹುತೇಕ ಅಂತ್ಯ
ಸಕಲೇಶಪುರ: ಭೂಮಿ ಹಕ್ಕುಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ _7 ದಿನಗಳಿಂದ ದಲಿತ ಸಂಘರ್ಷ ಸಮಿತಿ , ಕರ್ನಾಟಕ (ರಿ) ವತಿಯಿಂದ ಮಾಡುತ್ತಿರುವ ನಿರಂತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಘಟನೆಯ ಮುಖಂಡರ ಜೊತೆಗೆ ಜಿಲ್ಲಾಧಿಕಾರಿ ಅರ್ಚನಾ ಮಾತುಕತೆ ನಡೆಸಿದರು.

ಪ್ರವಾಸಿ ಮಂದಿರದಲ್ಲಿ ಮುಖಂಡರ ಜೊತೆ ಸಭೆ ನಡೆಸಿದ ಅವರು ದಸಂಸದ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಸೋಮವಾರ ಅನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹ ಬಹುತೇಕವಾಗಿ ಮುಕ್ತಾಯವಾಗುವ ಸಾಧ್ಯತೆಯಿದೆ‌.‌ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಪ್ರತಿಭಟನೆ ಹಿನ್ನೆಲೆಯಲ್ಲಿ ಖುದ್ದು ಶಾಸಕ ಎಚ್.ಕೆ ಕುಮಾರಸ್ವಾಮಿ ಮನವಿ ಮಾಡಿದರು ಪ್ರತಿಭಟನೆ ಹಿಂಪಡೆದಿರಲಿಲ್ಲ.ಇದೀಗ ಜಿಲ್ಲಾಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವುದರಿಂದ ಸೋಮವಾರ ಮದ್ಯಾಹ್ನದ ವೇಳೆಗೆ ಪ್ರತಿಭಟನೆ ಹಿಂಪಡೆಯುವ ಬಹುತೇಕ ಸಾಧ್ಯತೆಯಿದೆ ಎಂದು ಸಂಘಟನೆಯ ತಾಲೂಕು ಸಂಚಾಲಕ ಮೋಹನ್ ಕುಮಾರ್ ಅಚ್ಚರಡಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಪ್ರತೀಕ್ ಬಾಯಲ್ ಕೂಡಾ ಉಪಸ್ಥಿರಿದ್ದರು.

ಜಿಲ್ಲಾ ದಸಂಸದ ಅಧ್ಯಕ್ಷರಾದ ವಲಳಹಳ್ಳಿ ವೀರೇಶ್, ಮುಖಂಡರುಗಳಾದ ಬೆಳಗೋಡು ಬಸವರಾಜು, ಜಯಕುಮಾರ್ ಹಾದಿಗೆ, ಹೆನ್ರಿ ಕಾಕನಮನೆ, ಜಗನ್ನಾಥ ಸಣ್ಣಪ್ಪ, ಎ.ಇ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular