ಸಕಲೇಶಪುರ: ರಾಜ್ಯದ ಉಳಿವಿಗೆ ಜೆಡಿಎಸ್‌ನಂತಹ ಪ್ರಾದೇಶಿಕ ಪಕ್ಷ ಅಧಿಕಾರಕ್ಕೇರಬೇಕಾದ ಅವಶ್ಯಕತೆಯಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದರು.
ಪಟ್ಟಣದಲ್ಲಿ ಜೆಡಿಎಸ್ ವತಿಯಿಂದ ನಡೆದ ರೋಡ್‌ಷೋ ಉದ್ದೇಶಿಸಿ ಮಾತನಾಡಿ ಈ ಹಿಂದೆ ಬಿಜೆಪಿಯ 18 ಲೋಕಸಭಾ ಸದಸ್ಯರು ಹಾಗೂ ಕಾಂಗ್ರೆಸ್‌ನ 4 ಲೋಕಸಬಾ ಸದಸ್ಯರಿದ್ದರು ಸಹ ಕಾವೇರಿ ನೀರಿನ ವಿವಾದವನ್ನು ಬಗೆಹರಿಸಲಿಲ್ಲ. ನಾನು ಏಕಾಂಗಿಯಾಗಿ ಹೋರಾಟ ಮಾಡಿದರು ಸಹ ಯಾರ ನನನ್ನು ಬೆಂಬಲಿಸಲಿಲ್ಲ. ರಾಜ್ಯದ ಉಳಿವಿಗಾಗಿ ಜೆಡಿಎಸ್ ಪಕ್ಷದ ಅವಶ್ಯಕತೆಯಿದೆ. ಕನ್ನಡಿಗರು ಸ್ವಾಭಿಮಾನಿಗಳು ತಮಿಳರಿಗೇನು ಕಡಿಮೆಯಿಲ್ಲ, ಸ್ವಾಭಿಮಾನಕ್ಕಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೀವೆಲ್ಲಾ ಜೆಡಿಎಸ್ ಬೆಂಬಲಿಸಬೇಕೆಂದು ಕರೆ ನೀಡಿದರು.
ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ ಇಬ್ರಾಹಿಂ ಮಾತನಾಡಿ ಕಾಂಗ್ರೆಸ್ ನದು 20% ಸರ್ಕಾರವಾದರೆ ಬಿಜೆಪಿಯದು 40%, ಬಿಜೆಪಿ ಹಾಗೂ ಕಾಂಗ್ರೆಸ್ ಕೇವಲ ಲೂಟಿ ಹೊಡೆದಿದ್ದೆ ಬಂತು. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗೆ ಯಾವುದೆ ಗ್ಯಾರಂಟಿ ಇಲ್ಲ. ರಾಜ್ಯದ ಅಭಿವೃದ್ದಿಗೆ ಕುಮಾರಸ್ವಾಮಿರವರ ಪಂಚರತ್ನ ಯೋಜನೆಯ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿರವರು ಅಧಿಕಾರಕ್ಕೇರಲು ಮತದಾರರು ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ ನಾನು ಯಾವುದೆ ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ವಿರೋ‘ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಮತದಾರರು ಮತೊಮ್ಮೆ ನನ್ನನ್ನು ಬೆಂಬಲಿಸಬೇಕೆಂದು ಹೇಳಿದರು.
ಕಳೆದ ಬಾರಿಯ ಬಿಜೆಪಿ ಪರಾಜಿತ ಅಭ್ಯರ್ಥಿ ನಾರ್ವೆ ಸೋಮಶೇಖರ್ ದೇವೆಗೌಡರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಕಾಂಗ್ರೆಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಸುನಂದಾ ನಾಗರಾಜ್, ಕಾಂಗ್ರೆಸ್‌ನ ಮಸ್ತಾರೆ ಲೋಕೇಶ್, ಬಿಜೆಪಿಯ ಹೆತ್ತೂರು ವಿಜಯಕುಮಾರ್, ಮುಂತಾದವರು ಪಕ್ಷ ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ರೇವಣ್ಣ, ಜೆಡಿಎಸ್ ಅಭ್ಯರ್ಥಿ ಎಚ್.ಕೆ ಕುಮಾರಸ್ವಾಮಿ, ಜಿ.ಪಂ ಮಾಜಿ ಸದಸ್ಯರುಗಳಾದ ಚಂಚಲಾ ಕುಮಾರಸ್ವಾಮಿ, ಸುಪ್ರದೀಪ್ತ್ ಯಜಮಾನ್, ಉಜ್ಮಾ ರುಜ್ವಿ, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್ ಸೋಮಶೇಖರ್, ಆಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ಮಂಜೇಗೌಡ, ಮುಖಂಡರುಗಳಾದ ಸಚ್ಚಿನ್ ಪ್ರಸಾದ್, ಬಾಳ್ಳು ಜಗನ್ನಾಥ್ ಮುಂತಾದವರು ಹಾಜರಿದ್ದರು.