Thursday, November 21, 2024
Homeಸುದ್ದಿಗಳುಸಕಲೇಶಪುರಪರಿಹಾರ ನೀಡಲು ವಿಳಂಬ ಸಕಲೇಶಪುರ ಎಸಿ ಕಚೇರಿ ಜಪ್ತಿ

ಪರಿಹಾರ ನೀಡಲು ವಿಳಂಬ ಸಕಲೇಶಪುರ ಎಸಿ ಕಚೇರಿ ಜಪ್ತಿ

ಪರಿಹಾರ ನೀಡಲು ವಿಳಂಬ : ಸಕಲೇಶಪುರ ಎಸಿ ಕಚೇರಿ ಜಪ್ತಿ 

ಸಕಲೇಶಪುರ : ಪರಿಹಾರ ನೀಡಲು ವಿಫಲಗೊಂಡ ಪರಿಣಾಮ ಉಪವಿಭಾಗಾಧಿಕಾರಿ ಕಚೇರಿಯನ್ನು ಬೇಲೂರು ನ್ಯಾಯಾಲಯದ ಆದೇಶದಂತೆ ಶುಕ್ರವಾರ ಜಪ್ತಿಮಾಡಲಾಗಿದೆ.

ಪ್ರಕರಣ: 1994 ರಲ್ಲಿ ಬೇಲೂರು ಚನ್ನಕೇಶವ ದೇವಾಲಯಕ್ಕೆ ಹೊಂದಿಕೊAಡಿರುವ 800 ಚದರ ಅಡಿ ಜಮೀನನ್ನು ಪ್ರತಿ ಚದರ ಅಡಿಗೆ 277 ರೂಗಳಂತೆ ಪರಿಹಾರ ನೀಡಿ ಪ್ರವಾಸೋಧ್ಯಮ ಇಲಾಖೆ ಹೋಟೆಲ್ ನಿರ್ಮಾಣಕ್ಕಾಗಿ ವಶಕ್ಕೆ ಪಡೆದಿತ್ತು. ಆದರೆ, ಜಮೀನುದಾರರಾದ ಸುದೀಂದ್ರ ಹಾಗು ರಾಮು ಎಂಬುವವರು ಹೆಚ್ಚಿನ ಪರಿಹಾರ ನೀಡುವಂತೆ ಕೋರಿ ನ್ಯಾಯಾಲಯದ ಮೊರೆಹೋಗಿದ್ದರು. ದೀರ್ಘ ವಿಚಾರಣೆಯ ನಂತರ ನ್ಯಾಯಾಲಯ 2017 ರಲ್ಲಿ ಪ್ರತಿ ಚದರ ಅಡಿಗೆ 950 ರೂಗಳಂತೆ ಪ್ರತಿವ್ಯಕ್ತಿಗೆ 1.75 ಕೋಟಿ ಪರಿಹಾರ ನೀಡುವಂತೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿರುವ ಸಕಲೇಶಪುರ ಉಪವಿಭಾಗಾಧಿಕಾರಿಗಳಿಗೆ ಆದೇಶ ನೀಡಿತ್ತು. ಆದರೆ, ತೀರ್ಪು ಪ್ರಕಟಗೊಂಡು ಏಳು ವರ್ಷ ಕಳೆದರು ಪರಿಹಾರ ನೀಡದ ಹಿನ್ನಲೆಯಲ್ಲಿ ನ್ಯಾಯಾಲಯ ಕಚೇರಿ ಜಪ್ತಿಗೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಆಗಮಿಸಿದ್ದ ನ್ಯಾಯಾಲಯದ ಸಿಬ್ಬಂದಿಗಳು ಉಪವಿಭಾಗಾಧಿಕಾರಿಗಳ ಜೀಪು ಸೇರಿದಂತೆ ಕಚೇರಿಯ ಸಂಪೂರ್ಣ ಪೀಠೋಪಕರಣಗಳನ್ನು ಜಪ್ತಿ ಮಾಡಿ ಎರಡು ಲಾರಿಯಲ್ಲಿ ಬೇಲೂರು ನ್ಯಾಯಾಲಯಕ್ಕೆ ಸಾಗಿಸಿದರು. ಜಮೀನುದಾರರ ಪರವಾಗಿ ಕೆ.ಎಲ್ ನಟರಾಜ್ ವಾದಮಂಡಿಸಿದ್ದರು.

12 ಎಸ್‌ಕೆಪಿಪಿ 3 ಉಪವಿಭಾಗಾಧಿಕಾರಿ ಕಚೇರಿ ಜಪ್ತಿಮಾಡಿದ ಅಧಿಕಾರಿಗಳು

RELATED ARTICLES
- Advertisment -spot_img

Most Popular