ಸಕಲೇಶಪುರ: ಪಟ್ಟಣದಲ್ಲಿ ಹಲವು ವರ್ಷಗಳ ಕಾಲ ವಿಡಿಯೋ ಕ್ಯಾಸೆಟ್ ಅಂಗಡಿ ನಡೆಸಿಕೊಂಡು ಹೊಳೆ ಮಲ್ಲೇಶ್ವರ ದೇವಸ್ಥಾನ ಭಜನಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದ ವಿನೋದ್ ಶಾ (68) ಗುಜರಾತ್ನ ರಾಜ್ಕೋಟ್ದಲ್ಲಿ ನಿಧನರಾಗಿದ್ದಾರೆ. ವಿನೋದ್ ಶಾ ಕುಟುಂಬದವರು ಪಟ್ಟಣದ ಮಲ್ಲಮ್ಮನ ಬೀದಿ ಹಾಗೂ ಅಗ್ರಹಾರ ಬಡಾವಣೆಯಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದು ಕಳೆದ 8 ವರ್ಷಗಳ ಹಿಂದೆ ಗುಜರಾತ್ಗೆ ಸ್ಥಳಾಂತರಗೊಂಡಿದ್ದರು. ಮೃತರ ಪತ್ನಿ ನಿಧನರಾಗಿದ್ದು ಓರ್ವ ಪುತ್ರನಿದ್ದಾನೆ. ಮೃತರ ಸಾವಿಗೆ ಹೊಳೆಮಲ್ಲೇಶ್ವರ ದೇವಸ್ಥಾನ ಸಮತಿಯ ಪದಾಧಿಕಾರಿಗಳು, ಸಮಾಜ ಸೇವಕ ಶ್ರೀ ಪ್ರಕಾಶ್ ಧನಾವತ್ ಮುಂತಾದವರು ಕಂಬನಿ ಮಿಡಿದಿದ್ದಾರೆ.