Tuesday, December 3, 2024
Homeಅಂಕಣಸಂಘಟನೆ ಚುರುಕುಗೊಳಿಸಿದ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಅಕಾಂಕ್ಷಿ ಡಿ.ಮಲ್ಲೇಶ್

ಸಂಘಟನೆ ಚುರುಕುಗೊಳಿಸಿದ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಅಕಾಂಕ್ಷಿ ಡಿ.ಮಲ್ಲೇಶ್

ಸಕಲೇಶಪುರ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೇಟ್ ಅಕಾಂಕ್ಷಿ ಡಿ.ಮಲ್ಲೇಶ್ ಕ್ಷೇತ್ರದಲ್ಲಿ ಸಂಘಟನೆಯನ್ನು ಚುರುಕುಗೊಳಿಸಿದ್ದಾರೆ.

    ವಿವಿಧ ಸಮೀಕ್ಷೆಗಳಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಮುರುಳಿ ಮೋಹನ್ ಗೆ ಟಿಕೇಟ್ ಖಚಿತ ಎಂದು ಹೇಳುತ್ತಿರುವುದರಿಂದ  ಕ್ಷೇತ್ರದಲ್ಲಿ ಮತೋರ್ವ ಪ್ರಬಲ ಕಾಂಗ್ರೆಸ್ ಟಿಕೇಟ್ ಅಕಾಂಕ್ಷಿಯಾದ ಡಿ.ಮಲ್ಲೇಶ್ ಟಿಕೇಟ್ ಪಡೆಯಲು ತನ್ನದೆ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಡಿ.ಮಲ್ಲೇಶ್ ಪಕ್ಷದ ಹೈಕಮಾಂಡ್ ನೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಅಲ್ಲದೆ ಕ್ಷೇತ್ರದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುಕೊಳ್ಳುತ್ತಿದ್ದಾರೆ. ಸರಳ ಸ್ವಭಾವದ ಡಿ.ಮಲ್ಲೇಶ್  2013ರ ವಿಧಾನಸಭಾ ಚುನಾವಣೆಯಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಫರ್ಧಿಸಿ 30533 ಮತಗಳನ್ನು ಪಡೆದು ದ್ವಿತೀಯಾ ಸ್ಥಾನವನ್ನು ಪಡೆದಿದ್ದರು. ಸರಳ ಸ್ವಭಾವದ ಡಿ.ಮಲ್ಲೇಶ್ ದಲಿತ ಸಮುದಾಯ ಮಾತ್ರವಲ್ಲ ಇತರ ಸಮಾಜಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಡಿ.ಮಲ್ಲೇಶ್ ಕ್ಷೇತ್ರದಲ್ಲಿ ಸಂಘಟನೆ ಚುರುಕುಗೊಳಿಸಿದ್ದು ವಿವಿಧ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡುವುದಲ್ಲದೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಮನೆಗಳಿಗೆ ಸದ್ದಿಲ್ಲದೆ ಭೇಟಿ ಮಾಡಿ ಬರುತ್ತಿದ್ದಾರೆ. ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಶಾಸಕರಾಗಿದ್ದ ಡಿ.ಮಲ್ಲೇಶ್ ರವರಿಗೆ ಪಕ್ಷದ ಹೈಕಮಾಂಡ್ ಈ ಬಾರಿ ಮಣೆಹಾಕುತ್ತದೆಯೆ ಎಂದು ಕಾದು ನೋಡಬೇಕಾಗಿದೆ.

 

 

 

 

                                           

RELATED ARTICLES
- Advertisment -spot_img

Most Popular