ಸಿ.ಟಿ ರವಿ ಹೇಳಿಕೆ ಶೋಭೆ ತರುವಂತದಲ್ಲ: ಶಾಸಕ ಎಚ್.ಕೆ ಕುಮಾರಸ್ವಾಮಿ
ಸಕಲೇಶಪುರ: ಜೋಕರ್ ಮೇಲೆ ಕೆಲವು ಸಂದರ್ಭದಲ್ಲಿ ಆಟ ನಿಂತಿರುತ್ತದೆ ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇತ್ತೀಚೆಗೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿ.ಟಿ ರವಿ ಜೆಡಿಎಸ್ ಪಕ್ಷವನ್ನು ಜೋಕರ್‌ಗೆ ಹೋಲಿಕೆ ಮಾಡಿದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಒಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈ ರೀತಿಯ ಹೇಳಿಕೆ ನೀಡುವುದು ಅವರಿಗೂ ಮತ್ತು ಪಕ್ಷಕ್ಕೂ ಶೋಭೆ ತರುವುದಿಲ್ಲ .ಮುಂದಿನ ಕೆಲವೇ ದಿನಗಳಲ್ಲಿ ಜೋಕರ್‌ನಿಂದ ಆಟ ಮುಗಿಯುತ್ತದೋ ಅಥವಾ ನೇರವಾಗಿ ಆಟ ಮುಗಿಯುತ್ತದೆಯೋ ಎಂಬುದು ಗೊತ್ತಾಗುತ್ತದೆ. ಅವರ ಹೇಳಿಕೆಯನ್ನು ಗಮನಿಸಿದಾಗ ಮುಂದಿನ ದಿನಗಳಲ್ಲಿ ಜೋಕರ್‌ನ ಅವಶ್ಯಕತೆ ಅವರಿಗೆ ಬರಬಹುದು ಅನಿಸುತ್ತದೆ. ಯಾವುದೆ ಕಾರಣಕ್ಕೋ ಬಿಜೆಪಿ ಅಧಿಕಾರಕ್ಕೇ ಬರುವುದಿಲ್ಲ ಎಂಬುದು ಅವರಿಗೂ ಸಹ ಗೊತ್ತಿದೆ.ಜನ ಬಿಜೆಪಿ ವಿರುದ್ದ ಬೇಸತ್ತಿದ್ದು ಬಿಜೆಪಿ ಈ ಬಾರಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ಸಂಖ್ಯೆ ಹತ್ತಿರಕ್ಕೂ ಬರುವುದಿಲ್ಲ. ಕ್ಷೇತ್ರದ ಅಭಿವೃದ್ದಿಗೆ ನಾನು ಹೆಚ್ಚಿನ ಅನುದಾನ ತಂದಿದ್ದೇನೆ ಹೀಗಿದ್ದರು ಸಹ ಮುಖ್ಯಮಂತ್ರಿಗಳು ಎತ್ತಿನಹೊಳೆ ಯೋಜನೆಯಡಿ ಹಾಸನಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಎತ್ತಿನಹೊಳೆ ಯೋಜನೆ ಹಾಸನಕ್ಕೆ ಯಾವುದೆ ಸಂಬಂಧವಿಲ್ಲ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದು ಖಚಿತವಾಗಿದ್ದು ಅವರು ಅನುದಾನ ಕೊಟ್ಟಿರುವ ಕುರಿತು ಅವರೇ ಹೇಳಬೇಕು. ನನ್ನನ್ನು ಹಾಯೋದಿಲ್ಲ ಹಾಗೂ ಒದೆಯುವುದಿಲ್ಲ ಎನ್ನುವವರು ಅರ್ಥ ಮಾಡಿಕೊಳ್ಳಬೇಕು , ಅಧಿಕಾರ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಒದೆಯೋದು ಮುಖ್ಯ ಅಲ್ಲ, ಕೆಲಸ ಮುಖ್ಯ ಎಂದರು. ಹಾಸನದ ಶಾಸಕರು ಹಾಸನದ ಎಲ್ಲಾ ಚಟುವಟಿಕೆಗಳನ್ನು ಇಲ್ಲಿ ತಮ್ಮ ಹಿಂಬಾಲಕರ ಮೂಲಕ ಮಾಡಿಸಿಕೊಳ್ಳಲು ತಮಗೆ ಬೇಕಾದ ಅಭ್ಯರ್ಥಿಗೆ ಟಿಕೇಟ್ ಕೊಡಿಸಿದ್ದಾರೆ. ಕಳೆದ 15 ವರ್ಷಗಳಲ್ಲಿ 94 ಸಿ.ಎಲ್ 7 ಆಗಿದ್ದರೆ ಕಳೆದ 3 ವರ್ಷಗಳಲ್ಲಿ ಹಾಸನದ ಶಾಸಕರು 94 ಸಿ.ಎಲ್ 7ಗೆ ಲೈಸೆನ್‌ಸ್ ಕೊಡಿಸಿದ್ದಾರೆ. ಸೋಲು ಗೆಲುವು ಚುನಾವಣೆಯಲ್ಲಿ ಇದ್ದಿದ್ದೆ 50ಸಾವಿರ ಮತಗಳಿಂದ ನಾನು ಗೆಲ್ಲುತ್ತೇನೆ ಎಂಬುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ವಾಜಪೇಯಿ, ದೇವೆಗೌಡರಂತಹವರೆ ಸೋತಿದ್ದಾರೆ. ಆದ್ದರಿಂದ ಅವರು ದುರಂಕಾರದ ಹೇಳಿಕೆಯನ್ನು ಕೊಡುವುದು ನಿಲ್ಲಿಸಲಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯರುಗಳಾದ ಚಂಚಲಾ ಕುಮಾರಸ್ವಾಮಿ, ಸುಪ್ರದೀಪ್‌ತ್ ಯಜಮಾನ್, ಸಚ್ಚಿನ್ ಪ್ರಸಾದ್, ಪುರಸಭಾ ಸದಸ್ಯರುಗಳಾದ ಇಸ್ರಾರ್, ವಿದ್ಯಾ, ಸಮೀರ್, ಯಾದ್‌ಗಾರ್ ಇಬ್ರಾಹಿಂ, ಪ್ರಜ್ವಲ್, ಉಮೇಶ್, ಮಳಲಿ ಗ್ರಾ.ಪಂ ಅಧ್ಯಕ್ಷ ಸತೀಶ್ ಶೆಟ್ಟಿ ಮತ್ತಿತರರು ಹಾಜರಿದ್ದರು.
3ಎಸ್.ಕೆ.ಪಿ.ಪಿ 2 ಸಕಲೇಶಪುರ ಪಟ್ಟಣದ ಆಚಂಗಿ ಬಡಾವಣೆಯಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಹಲವು ಕಾರ್ಯಕರ್ತರು ಕಾಂಗ್ರೆಸ್‌ನಿಂದ ಜೆಡಿಎಸ್ ಸೇರ್ಪಡೆಗೊಂಡರು.