ಸಕಲೇಶಪುರ:- ತಾಲ್ಲೂಕಿನ ಹಲವು ಸಮಸ್ಯೆಗಳ ಬಗ್ಗೆ ತಾಲ್ಲೂಕು ಕಚೇರಿ ಮುಂಭಾಗ ಅರ್ಜಿ ಸ್ವೀಕರಿಸುವ ಮುಖಾಂತರ ನಮ್ಮ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟ ಕಾಲ ನಿರಂತರ ಧರಣಿ ನೆಡಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ-ಕರ್ನಾಟಕ(ರಿ)ನ ಜಿಲ್ಲಾ ಸಂಚಾಲಕರಾದ ವಳಲಹಳ್ಳಿ ವಿರೇಶ್ ತಿಳಿಸಿದರು.
ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ದಲಿತರ ಗೋಳು ಇಂದಿನದಲ್ಲ ನಮ್ಮ ಪೂರ್ವಜರ ಕಾಲದಿಂದ ನಮ್ಮ ಜನ ಎಲ್ಲದಕ್ಕೂ ಗೋಗರೆಯುವ ಹಲವು ಸನ್ನಿವೇಶವನ್ನು ಎದುರಿಸುತ್ತಲೇ ಬಂದಿದ್ದಾರೆ.ಅಂಬೇಡ್ಕರ್ ರವರು ದಲಿತರು,ಬಡವರು,ಶೋಷಿತರು ಹಾಗೂ ನಿರ್ಗತಿಕರ ಪರವಾಗಿ ಶ್ರಮಿಸಿ ಎಲ್ಲ ಅವಕಾಶಗಳನ್ನು ಒದಗಿದರು.ಆದರೆ ಅವುಗಳನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೇವಲ ಉಳ್ಳವರ,ಪ್ರಭಾವಿಗಳಿಗೆ ಮಣೆ ಹಾಕಿ ಅನ್ಯಾಯಕ್ಕೊಳಗಾದವರನ್ನು ಮತ್ತಚ್ಟು ಸಂಕಷ್ಟದ ಕೂಪಕ್ಕೆ ತಳ್ಳುತ್ತಿದ್ದಾರೆ ಆದ್ದರಿಂದ ಫಾರಂ-50 ಮತ್ತು ಫಾರಂ-53 ವಜಾ ಆಗಿದ್ದ ಕಾರಣ ಫಾರಂ-57ರಲ್ಲಿ ಅರ್ಜಿ ಸಲ್ಲಿಸಿ ವ್ಯವಸಾಯ ಮಾಡಿಕೊಂಡಿರುತ್ತಾರೆ ಅಂತವರಿಗೆ ಮಂಜೂರು ಮಾಡಬೇಕು,ದರಖಾಸು ಫಾರಂ-50 ಮತ್ತು ಫಾರಂ-53ರಲ್ಲಿ ಮಂಜೂರಾತಿ ಆದವರ ದುರಸ್ತು,ಹದ್ದುಬಸ್ತು ಮಾಡಿಕೊಂಡಬೇಕು ಎಂದು ಒತ್ತಾಯಿಸಿದರು.94-ಸಿ ಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಎಚ್.ಆರ್.ಪಿ,ಡೀಮ್ದ್ ಫಾರೆಸ್ಟ್ ಮತ್ತು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಸಾಗುವಳಿ ಚೀಟಿ ವಿತರಣೆಯನ್ನು ಶೀಘ್ರವಾಗಿ ಮಾಡಬೇಕು ಎಂದರು.ತಾಲೂಕಿನ ಕೆಲವು ಗ್ರಾಮಗಳಲ್ಲಿ ಶವವನ್ನು ಉಳಲು ಸ್ಮಶಾನವಿಲ್ಲ ,ಸ್ಮಶಾನ ಜಾಗವಿದ್ದರೂ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಅಂತ ಜಾಗಗಳನ್ನು ಗುರುತಿಸಿ ತೆರವುಗೊಳಿಸಬೇಕು.ಪ್ರತಿ ಗ್ರಾಮದಲ್ಲೂ ಎಲ್ಲ ಜಾತಿಯ ಬಡವರಿಗೆ ನಿವೇಶನ ರಹಿತರಿಗೆ ಸಕಾರಿ ಜಾಗದಲ್ಲಿ 3 ಎಕರೆ ನಿಗದಿ ಪಡಿಸಬೇಕು.ಗ್ರಾಮ ಠಾಣಾ ಒತ್ತುವರಿಯನ್ನು ತೆರವುಗೊಳಿಸಿ ನಿರ್ಗತಿಕರಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ಅಗ್ರಹಿಸಿದರು ಇನ್ನು ಹತ್ತು ಹಲವು ಬೇಡಿಕೆಗಳಿದ್ದು ಎಲ್ಲವನ್ನು ಈಡೇರೆಸುವವರೆಗೂ ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈಗಾಗಲೇ ನಮ್ಮ ಧರಣಿಯನ್ನು ಹತ್ತಿಕ್ಕಲು ಕೆಲವರು ಷಡ್ಯಂತರ ರೂಪಿಸುತ್ತಿದ್ದಾರೆ ಆದರೆ ಅಂತ ಯಾವುದಕ್ಕೂ ನಾವು ಬಗ್ಗುವವರಲ್ಲ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಹೇಳಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಬೆಳಗೋಡು ಬಸವರಾಜ್ ಮಾತನಾಡಿ,ತಾಲೂಕಿನಲ್ಲಿ ಕೆಲ ಅಧಿಕಾರಿಗಳು ಬೇರೆ ಬೇರೆ ಉದ್ದೇಶಗಳಿಗಾಗಿ ಎಸ್.ಸಿ ಸರ್ಟಿಫಿಕೇಟ್ ನೀಡಿರುವುದು ನಮ್ಮ ಸಂಘಟನೆಯ ಗಮನಕ್ಕೆ ಬಂದಿದೆ ಈ ಕುರಿತು ಧರಣಿ ವೇಳೆ ಬಹಿರಂಗ ಪಡಿಸಿ ತಪ್ಪು ಮಾಡಿರುವ ಅಧಿಕಾರಿಗಳ ಅಮಾನತ್ತು ಮಾಡಲು ಅಗ್ರಹಿಸುತ್ತವೆ.ನಮ್ಮ ನಿರಂತರ ಧರಣಿಗೆ ಶಾಸಕರು ಬಂದು ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕು ಎಂದು ಒತ್ತಾಯಿಸಿದರು.ಕೆಲವು ಗ್ರಾಮಗಳಿಗೆ ನೀರಾವರಿ ಇಲಾಖೆ,ಲೋಕೋಪಯೋಗಿ,ಎಸ್.ಇ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಸಿಮೆಂಟ್ ರಸ್ತೆ ಮತ್ತು ಕುಡಿಯುವ ನೀರು ವ್ಯವಸ್ಥೆಯನ್ನು ತ್ವರಿತವಾಗಿ ಕ್ರಮವಹಿಸುವಂತೆ ಅಗ್ರಹಿಸಿದರು.ಧರಣಿಗೆ ಈಗಾಗಲೇ ಎಲ್ಲ ಜಾತಿ ಜನಾಂಗದವರು ಪ್ರಗತಿಪರ ಸಂಘಟನೆಗಳು,ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಹೆನ್ರಿ ಕಾಕನಮನೆ,ಹಾದಿಗೆ ಜಯಕುಮಾರ್,ಹೆಬ್ಬನಹಳ್ಳಿ ವಿರೇಶ್ ಇದ್ದರು.