Saturday, April 12, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ತಾಲೂಕು ವೀರಶೈವ ಸಮಾಜದಿಂದ ನೂತನ ಶಾಸಕ ಸಿಮೆಂಟ್ ಮಂಜುಗೆ ಅಭಿನಂದನೆ ಸಲ್ಲಿಕೆ.

ಸಕಲೇಶಪುರ ತಾಲೂಕು ವೀರಶೈವ ಸಮಾಜದಿಂದ ನೂತನ ಶಾಸಕ ಸಿಮೆಂಟ್ ಮಂಜುಗೆ ಅಭಿನಂದನೆ ಸಲ್ಲಿಕೆ.

ಸಕಲೇಶಪುರ ತಾಲೂಕು ವೀರಶೈವ ಸಮಾಜದಿಂದ ನೂತನ ಶಾಸಕ ಸಿಮೆಂಟ್ ಮಂಜುಗೆ ಅಭಿನಂದನೆ ಸಲ್ಲಿಕೆ.

ಗುರುವೇಗೌಡ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮ.

ಸಕಲೇಶಪುರ : ಭಾರತೀಯ ಜನತಾ ಪಾರ್ಟಿಯಿಂದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಸಿಮೆಂಟ್ ಮಂಜುನಾಥ್ ಅವರಿಗೆ ಸಕಲೇಶಪುರ ತಾಲೂಕು ಸಮಸ್ತ ವೀರಶೈವ ಸಮಾಜದ ವತಿಯಿಂದ ಶನಿವಾರ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಸಿಮೆಂಟ್ ಮಂಜುನಾಥ್,

12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಹಲವಾರು ಬದಲಾವಣೆಗಳನ್ನು ತಂದು ಜನರು ಹೇಗೆ ಬದುಕಬೇಕೆಂಬುದು ತಿಳಿಸಿಕೊಟ್ಟಿದ್ದಾರೆ . ಅವರ ಆದರ್ಶಗಳನ್ನು ಪಾಲಿಸಿಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ವೀರಶೈವ ಸಮಾಜ ಮತ್ತು ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿದೆ.ಸಮಾಜದಲ್ಲಿ ಸಾಮರಸ್ಯದ ಜೀವನ ಅಗತ್ಯ ಈ ನಿಟ್ಟಿನಲ್ಲಿ ಎಲ್ಲರನ್ನು ಒಟ್ಟಿಗೆ ಸೇರಿ ಕ್ಷೇತ್ರದ ಅಭಿವೃದ್ಧಿ ಗೆ ಕೈಜೋಡಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ದೇವರಾಜ್ (ದಿವಾನ್ )ಸಮಾಜದ ಕಾರ್ಯದರ್ಶಿ ಧರ್ಮಪ್ಪ, ವೀರಶೈವ ಯುವ ವೇದಿಕೆ ಅಧ್ಯಕ್ಷ ಶಶಿಧರ್, ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕೆ ಶಶಿಕಲಾ. ಸಮಾಜದ ಮುಖಂಡರಾದ ಎ. ವಿ ನರೇಶ್.ಯತೀಶ್, ಗಗನ್,ಸೋಮಣ್ಣ,ಪುನೀತ್ ಬನ್ನಳ್ಳಿ ಮಂಜುನಾಥ್,ಶರತ್ ವಿರಾಸ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular