Thursday, February 20, 2025
Homeಸುದ್ದಿಗಳುಸಕಲೇಶಪುರಹಾಸನ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಜೇಗೌಡರಿಗೆ ಸಂತಾಪ 

ಹಾಸನ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಜೇಗೌಡರಿಗೆ ಸಂತಾಪ 

ಹಾಸನ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಜೇಗೌಡರಿಗೆ ಸಂತಾಪ 

🌸 ಮೃತರ ಅಂತಿಮ ದರ್ಶನ ಪಡೆದ ಶಾಸಕ ಸಿಮೆಂಟ್ ಮಂಜು.

ಸಕಲೇಶಪುರ:ಹಾಸನ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು ಆದ ಮಾಗೇರಿ ರಾಜೇಗೌಡ (72) ಅನಾರೋಗ್ಯದಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶನಿವಾರ ಅವರ ಅಂತ್ಯಕ್ರಿಯೆ ಅವರ ಹುಟ್ಟೂರು ಸಕಲೇಶಪುರ ತಾಲೂಕು ವನಗೂರು ಸಮೀಪದ ಮಾಗೇರಿ ಗ್ರಾಮದಲ್ಲಿ ನಡೆಯಿತು . ಜನ ಸಂಘ ಕಾಲದಿಂದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಇವರು ಜಿಲ್ಲೆ ಹಾಗೂ ತಾಲೂಕಿನಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮಪಟ್ಟಿದ್ದರು. ಬಿಜೆಪಿ ರಾಜ್ಯ ಸಮಿತಿ ಮಾಜಿ ಸದಸ್ಯರಾಗಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು ಆಗಿ ಸಹ ಜವಾಬ್ದಾರಿ ನಿರ್ವಹಿಸಿದ್ದರು 1994 ಮತ್ತು 2000 ಇಸವಿಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತ ದಲ್ಲಿ ಪರಾಭವಗೊಂಡಿದ್ದರು ಹಾಗೂ ಒಂದು ಬಾರಿ ತಾಲೂಕು ಬೋರ್ಡ್ ಸದಸ್ಯರು ಆಗಿದ್ದರು. ಮಲೆನಾಡಿನ ಗ್ರಾಮೀಣ ಬಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿ ಕುರಿತು ಮನಗಂಡಿದ್ದ ಇವರು ತನ್ನ ಬಾವ ದಿವಂಗತ ಹೊಂಗಡಹಳ್ಳ ‘ ಧರ್ಮರಾಜು ಜೊತೆಗೂಡಿ 1977ವನಗೂರಿನಲ್ಲಿ ವಿವೇಕಾನಂದ ಪ್ರೌಢಶಾಲೆ ತೆರೆದಿದ್ದರು. ಈ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಮತ್ತು ಶಿಸ್ತಿಗೆ ಆ ಕಾಲದಲ್ಲಿ ಹೆಸರು ಮಾಡಿತ್ತು ವಿದ್ಯಾರ್ಥಿ ಆಗಿದ್ದಾಗ ಪುತ್ತೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಸಹಪಾಟಿ ಆಗಿದ್ದ ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗಳಾಗಿ ಆಯ್ಕೆಯಾಗಿದ್ದರ. ತಮ್ಮ ರಾಜಕೀಯ ಜೀವನದಲ್ಲಿ ಇವರು ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ಹುಟ್ಟುಹಾಕಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು, ಅಪಾರ . ಬಂದು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.ಪಟ್ಟಣದ ಪುರಭವನದ ಆವರಣದಲ್ಲಿ ಕೆಲ ಕಾಲ ಮೃತರ ಶವವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು ಶಾಸಕ ಸಿಮೆಂಟ್ ಮಂಜು ,ಮಾಜಿ ಶಾಸಕ ವಿಶ್ವನಾಥ್,ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಸೇರಿದಂತೆ ಇನ್ನು ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -spot_img

Most Popular