Sunday, November 24, 2024
Homeಸುದ್ದಿಗಳುBREAKING: ಸಿಎಂ ಸಿದ್ದರಾಮಯ್ಯ, ಡಿಸಿಎಂ DK ಶಿವಕುಮಾರ್; ಇಂದು ಅಧಿಕೃತ ಘೋಷಣೆ

BREAKING: ಸಿಎಂ ಸಿದ್ದರಾಮಯ್ಯ, ಡಿಸಿಎಂ DK ಶಿವಕುಮಾರ್; ಇಂದು ಅಧಿಕೃತ ಘೋಷಣೆ

BREAKING: ಸಿಎಂ ಸಿದ್ದರಾಮಯ್ಯ, ಡಿಸಿಎಂ DK ಶಿವಕುಮಾರ್; ಇಂದು ಅಧಿಕೃತ ಘೋಷಣೆ

ಜ್ಯದ ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಳೆದ 5 ದಿನಗಳಿಂದ ಕಾಂಗ್ರೆಸ್ ಹೈಕಮಾಂಡ್ ನಾಯಕರು ದೆಹಲಿಯಲ್ಲಿ ಭಾರೀ ಕಸರತ್ತು ನಡೆಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಸಿಎಂ ರೇಸ್​ನಲ್ಲಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನನಗೆ ಸಿಎಂ ಪಟ್ಟ ಬೇಕೆಂದು ಜಿದ್ದಿಗೆ ಬಿದ್ದಿದ್ದರು.

ಇದೆಕ್ಕೆಲ್ಲ ಕಾಂಗ್ರೆಸ್​ ಹೈಕಮಾಂಡ್​ ಸಂಧಾನ ಸೂತ್ರ ಎಣೆದಿದ್ದು, ಇಂದು ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತಿದೆ.

ಮೇ 20 ರಂದು ಅಂದ್ರೆ ಇದೇ ಶನಿವಾರ ಸಿದ್ದರಾಮಯ್ಯ ರಾಜ್ಯದ 24ನೇ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಪ್ರಮಾಣ ವಚನ ಬೋಧಿಸಲಿದ್ದಾರೆ. ಇನ್ನು ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ.

ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಅನ್ನೋ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ನಿನ್ನೆಯೇ ಕಂಠೀರವ ಸ್ಟೇಡಿಯಂನಲ್ಲಿ ವೇದಿಕೆ ರೆಡಿ ಮಾಡಲು ಸಿದ್ಧತೆ ಆರಂಭವಾಗಿತ್ತು. ಕಾರ್ಯಕ್ರಮದ ‌ತಯಾರಿ ಬಗ್ಗೆ ಪ್ಲಾನ್ ಹೇಗಿರಬೇಕು ಎಂದು ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳು ಯೋಜನೆ ರೂಪಿಸಿದ್ದರು.

ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ನಾಗರತ್ನ, ಟ್ರಾಫಿಕ್ ಕಮಿಷನರ್ ಅನುಚೇತ್ ಅವರಿಂದ ಕಠೀರವ ಸ್ಟೇಡಿಯಂ ಪರೀಶೀಲನೆ ನಡೆಸಲಾಯಿತು. ಸ್ಟೇಡಿಯಂನಲ್ಲಿ ಗಣ್ಯರ ಆಗಮನಕ್ಕೆ ಸರಿಯಾದ ಮಾರ್ಗ, ವೇದಿಕೆ, ಚೇರ್​ಗಳು, ಲೈಟಿಂಗ್ಸ್​ ಸೇರಿದಂತೆ ಇನ್ನಿತರ ಕೆಲಸಗಳು ಇಂದು ಮತ್ತೆ ಶುರುವಾಗಲಿದೆ.

RELATED ARTICLES
- Advertisment -spot_img

Most Popular