ಸಕಲೇಶಪುರ : ಸಮಾನತೆ ಎಂದರೆ ಪುರುಷರು ಮತ್ತು ಮಹಿಳೆಯರು ತಮ್ಮ ನಡುವಿನ ವ್ಯತ್ಯಾಸವನ್ನು ತಿಳಿದು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಮತ್ತು ಗೌರವದಿಂದ ಕಾಣುವುದು ಎಂದು ಸಿಐಟಿಯುನ ಅಂಗನವಾಡಿ ಘಟಕದ ಜಿಲ್ಲಾ ಅಧ್ಯಕ್ಷೆ ಎಮ್ ಬಿ ಪುಷ್ಪ ಹೇಳಿದರು.
ಪಟ್ಟಣದ ಪುರಭವನದಲ್ಲಿ ಸಿಐಟಿಯುನ ತಾಲ್ಲೂಕು ಅಂಗನವಾಡಿ ಘಟಕದಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಎಂಬತ್ತು ವರ್ಷದಿಂದ ಭಾರತದಲ್ಲಿ ಹಲವಾರು ಕ್ಷೇತ್ರದಲ್ಲಿ ಬದಲಾವಣೆ ಆಗಿದ್ದರೂ ಸಹ ಹೆಣ್ಣು ಮಕ್ಕಳನ್ನು ನೋಡುವ ಸ್ಥಿತಿ ಇನ್ನೂ ಬದಲಾಗಿಲ್ಲ. ದೇಶದಲ್ಲಿ ಹೆಣ್ಣು ಮತ್ತು ಗಂಡಿಗೆ ಸೀಮಿತ ಗುಣವನ್ನು ನಿಗದಿಪಡಿಸಿದ್ದಾರೆ ಎಂದರು. ಹೆಣ್ಣು ಮಕ್ಕಳು ಸಹ ಮನುಷ್ಯರು ಎಂಬ ಕನಿಷ್ಠ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕು, ಮಹಿಳೆಯರ ಮೇಲೆ ನಡೆಯುವ ದೈಹಿಕ ಹಲ್ಲೆ, ಮಾನಸಿಕ ಕಿರುಕುಳಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಲೈಂಗಿಕ ದೌರ್ಜನ್ಯದ ವಿರುದ್ದ ಹೆಣ್ಣು ಮಕ್ಕಳು ಧ್ವನಿ ಎತ್ತಬೇಕು ಎಂದರು.
ಈ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಶಾರದ ಗುರುಮೂರ್ತಿ, ಸಿಐಟಿಯು ಅಂಗನವಾಡಿ ಘಟಕದ ತಾಲ್ಲೂಕು ಅಧ್ಯಕ್ಷೆ ನಾಗಲಕ್ಷ್ಮೀ, ಕಾರ್ಯದರ್ಶಿ ಸುಮಿತ್ರಾ , ಶಾರದ, ನೇತ್ರಾವತಿ, ಪದಾಧಿಕಾರಿಗಳಾದ ನಾಗರತ್ನ, ಪ್ರೀತು ಬಿ ವಿ, ಎಮ್ ವಿ ರೇಷ್ಮಾ, ನಾಝಿಯಾ,ಧನಲಕ್ಷ್ಮೀ, ಯಶೋಧ, ಕವಿತ, ಜ್ಯೋತಿ, ಕಮಲಾಕ್ಷಿ, ತಾರ, ಆಯಿಷಾ, ವೇದಾವತಿ ಸಿ , ಸರೋಜ,ಪವಿತ್ರ, ಶಕುಂತಲಾ, ಹಾಗು ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರು ಹಾಜರಿದ್ದರು.