Saturday, April 5, 2025
Homeಕ್ರೈಮ್ಚೆಕ್ ಬೌನ್ಸ್ ಪ್ರಕರಣ : ಖಾಸಗಿ ಶಾಲೆಯ ಮಾಜಿ ದೈಹಿಕ ಶಿಕ್ಷಕ ಜೈಲು ಪಾಲು.

ಚೆಕ್ ಬೌನ್ಸ್ ಪ್ರಕರಣ : ಖಾಸಗಿ ಶಾಲೆಯ ಮಾಜಿ ದೈಹಿಕ ಶಿಕ್ಷಕ ಜೈಲು ಪಾಲು.

ಚೆಕ್ ಬೌನ್ಸ್ ಪ್ರಕರಣ : ಖಾಸಗಿ ಶಾಲೆಯ ಮಾಜಿ ದೈಹಿಕ ಶಿಕ್ಷಕ ಜೈಲು ಪಾಲು.

ಸಕಲೇಶಪುರ : ಖಾಸಗಿ ಶಾಲೆಯ ಮಾಜಿ ದೈಹಿಕ ಶಿಕ್ಷಕನೊಬ್ಬನಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿರುವ ಘಟನೆ ನಡೆದಿದೆ.

ತಾಲೂಕಿನ ಬಾಳ್ಳುಪೇಟೆಯ ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವಾಗ ದುಶಾಂತ್ ಕುಮಾರ್ ಎಂಬುವರಿಗೆ 16 ಲಕ್ಷ ನೀಡಬೇಕಾಗಿತ್ತು. ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ದುಷ್ಯಂತ್ ಕುಮಾರ್ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ರಾಜು ಕೆ.ಎನ್ ರವರು ದುಷ್ಯಂತ್ ಕುಮಾರ್ ಅವರಿಗೆ 16 ಲಕ್ಷ ನೀಡುವಂತೆ ಆದೇಶ ನೀಡಿತ್ತು. ಆದರೆ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಕಳೆದ ಆರು ತಿಂಗಳಿಂದ ತಲೆಮರಿಸಿಕೊಂಡಿದ್ದ ರಾಜು ಸೋಮವಾರ ಸಕಲೇಶಪುರ ನಗರದ ಕ್ಯಾಂಟೀನ್ ನಲ್ಲಿ ಟೀ ಕುಡಿಯುತ್ತಿರುವಾಗ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

 ಬಂಧನವಾಗಿರುವ ರಾಜು ಈಗಾಗಲೇ ಬಾಳ್ಳುಪೇಟೆ ಸೇರಿದಂತೆ ಮುಂತಾದ ಕಡೆಗಳಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ವಂಚಿಸಿರುವ ಪ್ರಕರಣಗಳು ನ್ಯಾಯಾಲಯದಲ್ಲಿದಲ್ಲಿವೆ.ಬಾಳ್ಳುಪೇಟೆ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿರುವಾಗ ಸಿ.ಆರ್.ಎಸ್ ಚಿಟ್ಸ್ ಎಂಬ ಸಂಸ್ಥೆ ತೆರೆದು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ನಂತರ ಗ್ರಾಹಕರಿಗೆ ಹಣ ಹಿಂದಿರುಗಿಸದೆ ಪರಾರಿಯಾಗಿದ್ದನು.

RELATED ARTICLES
- Advertisment -spot_img

Most Popular