ಸಕಲೇಶಪುರ : ಪಕ್ಷದ ಮುಖಂಡರ ಕಾರ್ಯವೈಖರಿಯಿಂದ ಅಸಮಾಧಾನಗೊಂಡು ಬಾಗೆ ಗ್ರಾಮ ಪಂಚಾಯತಿಯ ಸದಸ್ಯ ಚಾರ್ಲ್ಸ್ರವರು ಪಕ್ಷದ ಜಿಲ್ಲಾ ಕಾರ್ಯದರ್ಶಿ ಹುದ್ದೆಗೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಈ ಕುರಿತು ಜಿಲ್ಲಾಧ್ಯಕ್ಷರಾದ ಲಕ್ಷ್ಮಣ್ರನ್ನು ಬೇಟಿಯಾಗಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಪಕ್ಷದ ಮುಖಂಡರ ಕಾರ್ಯವೈಖರಿಯಿಂದ ಬೆಸತ್ತು ಇನ್ನು ಹಲವು ಕಾರಣಗಳಿಂದಾಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ವಾಸ್ತವ ನ್ಯೂಸ್ಗೆ ತಿಳಿಸಿದ್ದಾರೆ.