ಸಕಲೇಶಪುರ: ಕಸಬಾ ಹೋಬಳಿ ಬೆಳೆಗಾರ ಸಂಘದ ಸಹಯೋಗದಲ್ಲಿ ಬ್ಯಾಕರವಳ್ಳಿ ಗ್ರಾಮ ಪಂಚಾಯತ್ ಬೆಳೆಗಾರ ಸಂಘದ ವತಿಯಿಂದ , “ಬದಲಾದ ಹವಾಮಾನದಲ್ಲಿ ಕಾಫಿ ಬೆಳೆ “ಎಂಬ ವಿಚಾರದ ಬಗ್ಗೆ ವಿಚಾರ ಸಂಕಿರಣವನ್ನು ಬ್ಯಾಕರವಳ್ಳಿಯ ನೇಚರ್ ಹೋಮ್ ಸ್ಟೇ ಆವರಣದಲ್ಲಿ ನೆಡೆಯಿತು.ಬಾಳೆಹೊನ್ನುರಿನ ಸಂಶೋಧನಾ ಕೇಂದ್ರ ದಿಂದ ಡಾ. ನಾಗರಾಜ್ , ಡಾ.ಮಧು, ಡಾ. ಗಿರಿ ಹಾಗೂ ಡಾ. ಸೋಮಶೇಖರ್ ಗೌಡ
ಪಾಟೀಲ್ ರವರು ವಿಷಯ ಮಂಡನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಬೆಳೆಗಾರ ಸಂಘದ ಅಧ್ಯಕ್ಷ ಕೆ.ಎನ್ ಸುಬ್ರಮಣ್ಯ, ಕೆಜಿಫ್ ಕಾರ್ಯದರ್ಶಿ ಕೆಬಿ ಕೃಷ್ಣಪ್ಪ, ಕಸಬಾ ಅಧ್ಯಕ್ಷ ಲೋಹಿತ್ ಕೆ.ಬಿ, ಕಾರ್ಯದರ್ಶಿ ಚಂದ್ರಶೇಖರ್, ಬ್ಯಾಕರವಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಮೇಘರಾಜ್, ಕಾರ್ಯದರ್ಶಿ ಸತೀಶ್ ನಲ್ಲೂಲ್ಲಿ, ಹರ್ಷ ಬ್ಯಾಕರವಳ್ಳಿ, ಪ್ರಸನ್ನ ಕುಣಿಗಲ್, ರತನ್ ಅರೆಕೆರೆ, ಅನಿಲ್ ಬೊಮ್ಮನಕೆರೆ, ವಿನೋದ್ ಅರೆಕೆರೆ ಹೀಗೆ ಸುಮಾರು 300 ಜನ ರೈತರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಹಾಗೂ ಕಾಫಿ ಬೆಳೆಗಾರ ಬ್ಯಾಕರವಳ್ಳಿ ಜಯಣ್ಣ ಅವರಿಗೆ ಸನ್ಮಾನ ಮಾಡಲಾಯಿತು