ದ್ವೇಷ ಭಾಷಣ ಪ್ರಕರಣ: ನನ್ನ ಆಪ್ತ ಸಹಾಯಕನ ಬಂಧನವಾಗಿಲ್ಲ: ಕೆಲವರಿಂದ ಅಪಪ್ರಚಾರ: ಶಾಸಕ ಸಿಮೆಂಟ್ ಮಂಜು
ಸಕಲೇಶಪುರ : ದ್ವೇಷ ಭಾಷಣ ಪ್ರಕರಣದಲ್ಲಿ ನನ್ನ ಆಪ್ತ ಸಹಾಯಕನ ಬಂಧನವಾಗಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿಕೆ ನೀಡಿದ್ದಾರೆ.
ಭಜರಂಗದಳದ ಮಾಜಿ ಕಾರ್ಯಕರ್ತ ರಘು ಕಳೆದ ಒಂದು ವರ್ಷದಿಂದ ನನ್ನ ಸಿಮೆಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ಧಾನೆ. ಮೊನ್ನೆ ಭಜರಂಗದಳ ವತಿಯಿಂದ ನಡೆದ ಪ್ರತಿಭಟನೆಯಲ್ಲೂ ಸಹ ಆತ ಭಾಗಿಯಾಗಿಲ್ಲ, ಆದರೂ ಸಹ ಕೆಲವರು ಉದ್ದೇಶಪೂರ್ವಕವಾಗಿ ನನಗೆ ಕೆಟ್ಟ ಹೆಸರು ತರಲು ಪೋಲಿಸರಿಗೆ ಒತ್ತಡ ಹೇರಿದ್ದರಿಂದ ಆತನನ್ನು ವಿಚಾರಣೆ ಮಾಡಿ ಕಳುಹಿಸಿದ್ದಾರೆ.ಆತನ ಬಂಧನವಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ಆಪ್ತ ಸಹಾಯಕರಾಗಿ ಸರ್ಕಾರಿ ಅಧಿಕಾರಿಯೋರ್ವರು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿನಾಕಾರಣ ಸುಳ್ಳು ಸುದ್ದಿ ಹರಡಿಸುವವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಪೋಲಿಸರಿಗೆ ದೂರು ಸಲ್ಲಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.