Sunday, April 20, 2025
Homeಸುದ್ದಿಗಳುಸಕಲೇಶಪುರಶಾಸಕ ಸಿಮೆಂಟ್ ಮಂಜುರವರಿಂದ ತೇಜಸ್ವಿ ವೃತ್ತ ಹಾಗೂ ಜಾನೆಕೆರೆ ಸೇತುವೆ ವೀಕ್ಷಣೆ

ಶಾಸಕ ಸಿಮೆಂಟ್ ಮಂಜುರವರಿಂದ ತೇಜಸ್ವಿ ವೃತ್ತ ಹಾಗೂ ಜಾನೆಕೆರೆ ಸೇತುವೆ ವೀಕ್ಷಣೆ

ಶಾಸಕ ಸಿಮೆಂಟ್ ಮಂಜುರವರಿಂದ ತೇಜಸ್ವಿ ವೃತ್ತ ಹಾಗೂ ಜಾನೆಕೆರೆ ಸೇತುವೆ ವೀಕ್ಷಣೆ
ಸಕಲೇಶಪುರ: ಗುಂಡಿ ಬಿದ್ದಿರುವ ಪಟ್ಟಣದ ತೇಜಸ್ವಿ ವೃತ್ತದಿಂದ ಬ್ಯಾದನೆವರೆಗಿನ ರಸ್ತೆ ಗೆ ಮರು ಡಾಂಬರಿಕರಣ ಕಾರ್ಯವನ್ನು ನಾಳೆಯಿಂದಲೆ ಆರಂಭಿಸಲಾಗುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.


ಪಟ್ಟಣದಲ್ಲಿ ಗುಂಡಿ ಬಿದ್ದಿರುವ ತೇಜಸ್ಬಿ ವೃತ್ತವನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ವೀಕ್ಷಿಸಿದ ನಂತರ ಮಾತನಾಡಿದ ಅವರು ಈ ಹಿಂದಿನ ಬೊಮ್ಮಾಯಿ ಸರ್ಕಾರ ಅವಧಿಯಲ್ಲಿ ಇಲ್ಲಿನ ರಸ್ತೆ ಅಭಿವೃದ್ಧಿ ಗೆ 4 ಕೋಟಿ ರೂ ಬಿಡುಗಡೆಯಾಗಿತ್ತು.ಆದರೆ ಕೆಲಸ ಪ್ರಾರಂಭವಾಗಿರಲಿಲ್ಲ,ತೇಜಸ್ವಿ ವೃತ್ತದಿಂದ ಬ್ಯಾದನೆವರೆಗಿನ ರಸ್ತೆ ಅವ್ಯವಸ್ಥೆ ಗಮನಿಸಿ ಕಾಮಗಾರಿ ನಡೆಸಲು ನಾಳೆಯಿಂದಲೇ ಆದೇಶಿಸಲಾಗಿದೆ. ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ ಆದೇಶಿಸಲಾಗಿದೆ. ರಸ್ತೆಗೆ ಹೊಂದಿಕೊಂಡಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆಯವರಿಗೆ ಆದೇಶಿಸಲಾಗಿದೆ.ಇದೇ ರೀತಿ ಜನ್ನಾಪುರ ವನಗೂರು ರಾಜ್ಯ ಹೆದ್ದಾರಿಯಲ್ಲಿ ಜಾನೆಕೆರೆ ಸಮೀಪ 2 ಕೋಟಿ 45 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಯನ್ನು ಸಹ ವೀಕ್ಷಿಸಲಾಗಿದೆ‌.ಈ ಎರಡು ಕಾಮಗಾರಿಗಳ ಗುಣಮಟ್ಟ ಕಾಪಾಡಬೇಕು ಹಾಗೂ ಮಳೆಗಾಲ ಆರಂಭವಾಗುವ ಒಳಗೆ ಕಾಮಗಾರಿ ಮುಗಿಸಲು ಆದೇಶಿಸಲಾಗಿದೆ. ಇದೇ ರೀತಿ ಹೇಮಾವತಿ ಸೇತುವೆ ಸಮೀಪ ಬಿದ್ದಿರುವ ಗುಂಡಿಗಳನ್ನು ಸಹ ಮುಚ್ಚಿಸಲು ಆದೇಶಿಸಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಭಿಯಂತರುಗಳಾದ ಮೋಹನ್,ವೆಂಕಟೇಶ್ ,ಪುರಸಭಾ ಸದಸ್ಯ ಪ್ರದೀಪ್, ಬಿಜೆಪಿ ಮುಖಂಡರುಗಳಾದ ಅಶ್ವಥ್, ನರೇಶ್, ಸುಧೀಶ್,ಅಶೋಕ್,ಶರತ್, ಅರೆಕೆರೆ ಕುಮಾರ್,ಮಹೇಂದ್ರ ಮುಂತಾದವರು ಹಾಜರಿದ್ದರು.

RELATED ARTICLES
- Advertisment -spot_img

Most Popular