ಸಕಲೇಶಪುರ : ಪಟ್ಟಣದ ಸಂತ ಜೋಸಫರ ಶಾಲೆಯಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಸ್ಟರ್ ಐಡ ಜವಹರಲಾಲ್ ನೆಹರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಪ್ರಮುಖ ರಾಜಕಾರಣಿಯಾಗಿದ್ದರು ಮತ್ತು ಅವರು ಭಾರತದ ಮಕ್ಕಳೊಂದಿಗೆ ಬಹಳ ಸಂಬಂಧವನ್ನು ಹಂಚಿಕೊಂಡಿದ್ದರು ಮಕ್ಕಳೂ ಅವರನ್ನು ಪ್ರೀತಿಯಿಂದ ಚಾಚಾ ನೆಹರೂ ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು. ಜವಾಹರಲಾಲ್ ನೆಹರು ತಮ್ಮ ಜೀವನದಲ್ಲಿ ಮಕ್ಕಳನ್ನು ಅವರ ಜಾತಿ, ಮತ, ಧರ್ಮ, ಸಂಸ್ಕೃತಿ ಯಾವುದನ್ನು ಲೆಕ್ಕಿಸದೆ ಮೆಚ್ಚಿ ಪ್ರೀತಿಸುತ್ತಿದ್ದರು,
ಈ ಸಂದರ್ಬದಲ್ಲಿ ಶಿಕ್ಷಕರಾದ ಫೆಡ್ರಿಕ್, ತಮಣ್ಣ, ಕೀರ್ತಿ ಕುಮಾರ್, ಮನೋಜ್, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸಿಸ್ಟರ್ ಆಶಾ, ಸಿಸ್ಟರ್ ಗೀತಾ ಇನ್ನಿತರರು ಇದ್ದರು.
ಈ ಸಂದರ್ಬದಲ್ಲಿ ಶಿಕ್ಷಕರಾದ ಫೆಡ್ರಿಕ್, ತಮಣ್ಣ, ಕೀರ್ತಿ ಕುಮಾರ್, ಮನೋಜ್, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸಿಸ್ಟರ್ ಆಶಾ, ಸಿಸ್ಟರ್ ಗೀತಾ ಇನ್ನಿತರರು ಇದ್ದರು.