ಬೈರಾಪುರ-ಚನ್ನಪುರ- ಮಗ್ಗೆ ರಸ್ತೆ ತಾತ್ಕಾಲಿಕ ಬಂದ್: ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೂಚನೆ.
ಆಲೂರು: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಮಳೆಗೆ ತಾಲೂಕಿನ ಬೇಲೂರು, ಕೊಡ್ಲಿಪೇಟೆ ರಾಜ್ಯ ಹೆದ್ದಾರಿ ಚನ್ನಾಪುರದ ಬಳಿ ತಡೆಗೋಡೆ ಕುಸಿದಿದ್ದು ಕಾಮಗಾರಿ ನಡೆಯುತ್ತಿರುವುದರಿಂದ ಬೈರಾಪುರ-ಚನ್ನಪುರ- ಮಗ್ಗೆ ಸಂಪರ್ಕಿಸಿ ರಸ್ತೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮುರುಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಲೂರು ಕೊಡ್ಲಿಪೇಟೆ 49.2 km ಉದ್ದದ ರಾಜ್ಯ ಹೆದ್ದಾರಿಯು ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರದ ಬಳಿ ತಡೆಗೋಡೆ ಕುಸಿದೆ ಉಂಟಾಗಿತ್ತು. SDMF/NDRF ಅಡಿಯಲ್ಲಿ ₹ 33 ಲಕ್ಷ ವೆಚ್ಚದಲ್ಲಿ ನೂತನ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಸದರಿ ಪ್ರದೇಶ ಶೀತವಾಗಿದ್ದು ಕಾಮಗಾರಿ ನಡೆಸುವ ವೇಳೆ ರಸ್ತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ 75 ರ ಪಾಳ್ಯ ಬಳಿಯ ಕಣದಹಳ್ಳಿ ವೃತದಿಂದ ಬಲ್ಲೂರು, ಬೆಟ್ಟಳ್ಳಿ ಕ್ರಾಸ್ ಮಾರ್ಗದ ಮೂಲಕ ಮಗ್ಗೆ ಗ್ರಾಮವನ್ನು ತಲುಪುವಂತೆ ಸೂಚಿಸಲಾಗಿದೆ.



