ಸಕಲೇಶಪುರ. ಪಟ್ಟಣದ ಕೌಡಹಳ್ಳಿ ಗ್ರಾಮದಲ್ಲಿರುವ ರೊಟರಿ ಸಂಸ್ಥೆಯ ಎನ್ ಕೆ ಗಣಪಯ್ಯ ಶ್ರವಣ ದೋಷ ಮಕ್ಕಳ ಶಾಲೆಯಲ್ಲಿ ಯೋಗ ಚೇತನ ಟ್ರಸ್ಟ್ ಸದಸ್ಯರು ಶ್ರವಣದೊಷ ವಿದ್ಯಾರ್ಥಿಗಳೊಂದಿಗೆ ಯೋಗ ಅಭ್ಯಾಸ ಮಾಡುವ ಮೂಲಕ ವಿಶೇಷವಾಗಿ ಮಕ್ಕಳ ದಿನಾಚರಣೆಯನ್ನು ಮಾಡಿದರು.
ಭಾನುವಾರ ಬೆಳಿಗ್ಗೆ ಯೊಗ ಗುರುಗಳಾದ ಜಗದೀಶ್ ಮಕ್ಕಳಿಗೆ ಯೊಗ ಅಭ್ಯಾಸ ಮಾಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರವಣ ದೊಷ ಹಾಗೂ ಇನ್ನಿತರ ವೈಫಲ್ಯ ದಿಂದ ಕೂಡಿರುವಂತಹ ಮಕ್ಕಳಿಗೆ ದೇವರು ಸಾಮನ್ಯರಿಗೆ ಇಲ್ಲದ ವಿಶೇಷ ವಾದ ಶಕ್ತಿಯನ್ನು ನೀಡಿರುತ್ತಾನೆ. ಸಮಾಜ ಈ ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು ಎಂದರು. ಈ ಸಂದರ್ಭದಲ್ಲಿ ಪಟ್ಟಣ ಕ್ರಾಫರ್ಡ್ ಆಸ್ಪತ್ರೆ ಕಣ್ಣಿನ ವೈಧ್ಯೆ ಡಾ ಅರುಣಾ ರವರು ಮಕ್ಕಳಿಗೆ ನೋಟ್ ಬುಕ್ಕ್ ವಿವರಿಸಿದರು. ನಂತರ ಮಕ್ಕಳೊಂದಿಗೆ ಎಲ್ಲರೂ ಬೆಳಗ್ಗಿನ ಉಪಹಾರ ಸೇವನೆ ಮಾಡಿದರು.
ಈ ಸಂದರ್ಭದಲ್ಲಿ ಯೋಗ ಚೇತನ ಟ್ರಸ್ಟ್ ನ ಅಧ್ಯಕ್ಷ ಲಕ್ಷ್ಮೀ ರಂಗನಾಥ್, ಲಕ್ಷಣ ಕೀರ್ತಿ, ಬಸವರಾಜು ಗೀತಾ ಕುಮಾರ್ ಜೆ ಎಸ್ ಎಸ್ ಬಿ ಎಡ್ ಕಾಲೇಜು ಉಪನ್ಯಾಸಕ ದಿನೇಶ್, ಶ್ರವಣ ದೊಷಮಕ್ಕಳ ಶಾಲೆಯ ಶಿಕ್ಷಕರಾದ ಲೋಕೇಶ್, ಕೌಡಹಳ್ಳಿ ರೋಹಿತ್ ,ವಿಠಲ್ ಮುಂತಾದವರು ಉಪಸ್ಥಿತರಿದ್ದರು.