ಸಕಲೇಶಪುರ: ಕೆ.ಎಸ್.ಆರ್.ಟಿ.ಸಿ ಚಾಲಕನ ಸಮಯಪ್ರಜ್ಞೆಯಿಂದ ಆನೆಮಹಲ್ ಗ್ರಾಮದ ಪ್ರಜ್ಞಾ ಕಾಲೇಜಿನ ಸಮೀಪ ಭೀಕರ ಅಪಘಾತವೊಂದು ತಪ್ಪಿದೆ.
ತಾಲೂಕಿನ ಆನೆಮಹಲ್ ಗ್ರಾಮದ ಪ್ರಜ್ಞಾ ಕಾಲೇಜಿನ ಸಮೀಪ ಹಾರ್ಲೇ ಎಸ್ಟೇಟ್ ಗೆ ಸೇರಿದ ಪಿಕ್ ಅಪ್ ವಾಹನವೊಂದನ್ನು ಚಲಾಯಿಸುತ್ತಿದ್ದ ಚಾಲಕ ಎದುರಿನಿಂದ ಬರುತ್ತಿರುವ ಬಸ್ ನೋಡದೆ ತನ್ನ ಮುಂದಿದ್ದ ವಾಹನವನ್ನು ತೋಟದ ಗದ್ದೆ ತಿರುವಿನಲ್ಲಿ ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ.ಪಿಕ್ ಅಪ್ ನೋಡಿದ ಬಸ್ ಚಾಲಕ ವೆಂಕಟೇಶ್ ತಕ್ಷಣ ಎಡಕ್ಕೆ ಬಸ್ ನ್ನು ತಿರುಗಿಸಿದ್ದು ಇದರಿಂದಾಗಿ ಬಸ್ ಪಿಕ್ ಅಪ್ ಗೆ ಡಿಕ್ಕಿ ಹೊಡೆಯುವುದು ತಪ್ಪಿದೆ.ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪಿಕ್ ಅಪ್ ವಾಹನ ಸವಾರ ಬಚಾವ್ ಆಗಿದ್ದಾನೆ.ಬಸ್ ಮೈಸೂರು ಘಟಕಕ್ಕೆ ಸೇರಿದ್ದು ಸೋಮವಾರಪೇಟೆ, ಹೆತ್ತೂರು ಮಾರ್ಗವಾಗಿ ಮೈಸೂರಿಗೆ ಹೋಗುತ್ತಿತ್ತು.ಪ್ರಜ್ಞಾ ಕಾಲೇಜಿನ ಸಮೀಪದ ತಿರುವು ಅತ್ಯಂತ ಅಪಾಯಕಾರಿಯಾಗಿದ್ದು ಇಲ್ಲಿ ಅಪಘಾತವಾಗದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆಲವೊಂದು ಸುರಕ್ಷತಾ ಕ್ರಮಗಳನ್ನು ಕೈ ಗೊಳ್ಳಬೇಕಾಗಿದೆ.