ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆ ಗ್ರಾಮದ ಅಂಗಡಿಯೊಂದರಲ್ಲಿ ದೇವರಿಗೆ ಹಚ್ಚಿಟ್ಟಿದ್ದ ದೀಪ ಉರುಳಿ ಬಿದ್ದ ಹಿನ್ನೆಲೆಯಲ್ಲಿ ಅಂಗಡಿಗೆ ಬೆಂಕಿ ತಗುಲಿದ ಘಟನೆ ಜರುಗಿದೆ.
ಗ್ರಾಮದ ಜಗದೀಶ್ ಎಂಬುವರ ದಿನಸಿ ಅಂಗಡಿ ಯಲ್ಲಿ ಮುಂಜಾನೆ ಪೂಜೆ ನೆರವೇರಿಸಿ ತಿಂಡಿಗೆ ಹೋಗಿದ್ದ ಸಮಯದಲ್ಲಿ ಇಲಿಯೊಂದು ದೀಪವನ್ನು ಉರುಳಿಸಿದ ಪರಿಣಾಮ ಅಂಗಡಿಗೆ ಬೆಂಕಿ ತಗಲಿದೆ. ತಕ್ಷಣವೇ ಅಕ್ಕಪಕ್ಕದವರು ಅದನ್ನು ಗಮನಿಸಿ ನೀರು ಎರಚಿದ್ದರಿಂದ ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದಂತಾಗಿದೆ.ಬೆಂಕಿ ಬಿದ್ದಿದ್ದರಿಂದ ಅಂಗಡಿ ಒಳಗಿಂದ ದಟ್ಟ ಹೊಗೆ ಹೊರಬಂದಿದ್ದು ಅಂಗಡಿಯಲ್ಲಿದ್ದ ಹಲವು ವಸ್ತುಗಳು ಸುಟ್ಟು ಹೋಗಿದೆ.