ಸಕಲೇಶಪುರ: ಬಿಜೆಪಿ ಈ ಬಾರಿ ಅಧಿಕಾರಕ್ಕೇರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜುನಾಥ್ ಪರ ರೋಡ್ ಷೋ ನಡೆಸಿ ಮಾತನಾಡಿ ರಾಜ್ಯದೆಲ್ಲೆಡೆ ಬಿಜೆಪಿ ಹವಾ ಇದೆ. ಈ ಬಾರಿ ಬಿಜೆಪಿ ಸರ್ಕಾರ ರಚನೆಯಾಗುವುದರಲ್ಲಿ ಅನುಮಾನವಿಲ್ಲ, ಹಾಸನದಲ್ಲಿ ಪ್ರೀತಮ್ ಗೌಡ ಹಾಗೂ ಸಕಲೇಶಪುರದಲ್ಲಿ ಸಿಮೆಂಟ್ ಮಂಜು ಗೆಲುವು ಖಚಿತವಾಗಿದೆ. ಬಿಜೆಪಿಯ ಪ್ರಣಾಳಿಕೆಯನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಮಾತನಾಡಿ ಪಕ್ಷ ಸಾಮಾನ್ಯ ಅಭ್ಯರ್ಥಿಗೆ ಟಿಕೇಟ್ ನೀಡಿದ್ದು ಕ್ಷೇತ್ರದ ಅಭಿವೃದ್ದಿಗಾಗಿ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ನಿಮ್ಮದಾಗಿದೆ ಎಂದರು.
ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗಿಯಾಗಿದ್ದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕೌಡಹಳ್ಳಿ ಲೋಹಿತ್ , ಪ್ರವೀಣ್, ಪ್ರೇಮ್ ಕುಮಾರ್, ಮನೋಜ್ ಮುಂತಾದವರು ಬಿಜೆಪಿ ಸೇರ್ಪಡೆಯಾದರು.
ಮಾಜಿ ಶಾಸಕರುಗಳಾದ ಎಚ್.ಎಂ ವಿಶ್ವನಾಥ್, ಬಿ.ಆರ್ ಗುರುದೇವ್,ಬಿಜೆಪಿ ಮುಖಂಡರುಗಳಾದ ಬಾಳ್ಳು ಮಲ್ಲಿಕಾರ್ಜುನ್, ಹುರುಡಿ ಅರುಣ್, ಹುರುಡಿ ಪ್ರಶಾಂತ್ ಮುಂತಾದವರು ಹಾಜರಿದ್ದರು.