ಸಕಲೇಶಪುರ : ಸೇತುವೆ ಹಾಗೂ ರಸ್ತೆಯಿಲ್ಲದೆ ಪರದಾಡುತ್ತಿದ್ದ ತಾಲೂಕಿನ ಹಾನುಬಾಳ್ ಹೋಬಳಿಯ ಸಂಕಲಾಪುರ ಮಠ ಗ್ರಾಮಕ್ಕೆ ಸೇತುವೆ ಹಾಗೂ ರಸ್ತೆ ಮಂಜುರಾಗಿದ್ದು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಶುಕ್ರವಾರ ತಾಲೂಕಿನ ಕ್ಯಾಮನಹಳ್ಳಿ-ಕಾಡುಮನೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಿಂದ ಸಂಕಲಾಪುರ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಶಾಸಕ ಎಚ್.ಕೆ ಕುಮಾರಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಸಂಕಲಾಪುರ ಮಠದಲ್ಲಿ ಬಡವರೇ ಹೆಚ್ಚಾಗಿದ್ದು ಮಳೆಗಾಲದಲ್ಲಿ ಗ್ರಾಮದ ಮುಖ್ಯರಸ್ತೆಗೆ ಬರಲು ಪರದಾಟ ಮಾಡುವುದನ್ನು ಮನಗೊಂಡು ಗ್ರಾಮವಿಕಾಸ್ ಯೋಜನೆಯಡಿಯಲ್ಲಿ ಶಾಸಕರ ಅನುದಾನದಿಂದ 50 ಲಕ್ಷ ರೂ ವೆಚ್ಚದಲ್ಲಿ ಸೇತುವೆ ಹಾಗೂ ಸುಮಾರು 560ಮೀಟರ್ ನಷ್ಟು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು
ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸಹನಾ ಪುನೀತ್, ಗ್ರಾ.ಪಂ ಉಪಾಧ್ಯಕ್ಷೆ ಗೀತಾ, ಸದಸ್ಯರುಗಳಾದ ಭಾಸ್ಕರ್, ಮಲ್ಲೇಶ್,ಆಕಾಶ್, ಸಚ್ಚಿನ್ , ಭವ್ಯ, ಕಾಫಿ ಬೆಳೆಗಾರ ಲೋಬೋ,ಕರುಣಾಕರ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ರಾಜ್ ಕುಮಾರ್, ಜೆಡಿಎಸ್ ವಕ್ತಾರ ಪ್ರಕಾಶ್ ಮುಂತಾದವರು ಹಾಜರಿದ್ದರು.
.
ತಾಜಾ ಸುದ್ದಿ