Sunday, November 24, 2024
Homeಸುದ್ದಿಗಳುಸಕಲೇಶಪುರಮಹಿಳಾ ಮೀಸಲಾತಿ ಮಸೂದೆ ಮಂಡನೆ: ಸಕಲೇಶಪುರ ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಬಾಳ್ಳುಪೇಟೆಯಲ್ಲಿ ಸಂಭ್ರಮಾಚರಣೆ

ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಸಕಲೇಶಪುರ ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಬಾಳ್ಳುಪೇಟೆಯಲ್ಲಿ ಸಂಭ್ರಮಾಚರಣೆ

 

ಸಕಲೇಶಪುರ : ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.

 

ತಾಲೂಕಿನ ಬಾಳ್ಳುಪೇಟೆಯಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಕೇಂದ್ರ ಸರಕಾರದ ಪರ ಘೋಷಣೆ ಕೂಗಿ ಸಿಹಿಹಂಚಿ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಸಿಮೆಂಟ್ ಮಂಜು ಮಾತನಾಡಿ . ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಸ ಸಂಸತ್​ ಕಟ್ಟಡದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದಾರೆ. ಇದರಿಂದ ಲೋಕಸಭೆಯಲ್ಲಿ ಮಹಿಳೆಯರ ಸಂಖ್ಯೆ ಏರಿಕೆ ಆಗಲಿದೆ. ಲೋಕಸಭೆಯಲ್ಲಿ ಮಹಿಳಾ ಜನಪ್ರತಿನಿಧಿಗಳ ಬಲ ಹೆಚ್ಚಲಿದೆ. ಇದರಿಂದ ದೇಶದಲ್ಲಿ ಮಹಿಳೆಯರ ಧ್ವನಿ ಹೆಚ್ಚಾಗಲಿದೆ.ಹಿಂದೆಲ್ಲಾ ಮಹಿಳಾ ಮಸೂದೆಯನ್ನು ಮಂಡಿಸಿದಾಗ ಬೆಂಬಲ ಸಿಗದೆ, ಮಸೂದೆಯು ಜಾರಿಯಾಗಲೇ ಇಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಲೋಕಸಭೆಯಲ್ಲಿ‌‌ ಮೊದಲ ಬಾರಿಗೆ ಮಂಡಿಸಿದಾಗಲೇ ಅದು ಎಲ್ಲರಿಗೂ ಒಪ್ಪಿಗೆ ಆಗಿದ್ದು ರಾಜ್ಯ ಸಭೆಯಲ್ಲೂ ಸಹ ಬೆಂಬಲ ದೊರಕಿದೆ . ಇದರಿಂದ ಮಹಿಳೆಯರಿಗೆ ದೇಶದ ಆರ್ಥಿಕ ಪ್ರಗತಿಯಲ್ಲೂ ಭಾಗಿಯಾಗುವ ಅವಕಾಶ ಸಿಕ್ಕಂತಾಗಿದೆ ಎಂದು ಹೇಳಿದರು.
ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್ ಮಾತನಾಡಿ,ಅವರು,ಕಳೆದ 27 ವರ್ಷಗಳಿಂದ ನಿರೀಕ್ಷಣೆಯಲ್ಲಿದ್ದವರಿಗೆ ಮೋದಿಜಿ ಸರಕಾರ ಇದಕ್ಕೆ ಮಹತ್ವ ನೀಡಿ ವಿದೇಯಕ ಮಂಡನೆ ಮಾಡಿರುವುದು ಐತಿಹಾಸಿಕ ನಿರ್ಣವಾಗಿದೆ. ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಬೇಕು. ದೇಶದ ಅರ್ಧದಸ್ಟು ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಅವರುಗಳ ಸಮಸ್ಯೆಗಳನ್ನು ಕಂಡುಕೊಳ್ಳಲು ಉತ್ತಮ ವೇದಿಕೆ ಅತಿ ಮುಖ್ಯವಾಗಿದ್ದೂ ಮಿಸಲಾತಿಯ ಕ್ರಮ ಕೈಗೊಂಡರೆ ಅವಕಾಶ ಕಲ್ಪಿಸಿದಂತಾಗಿದೆ. ರಾಜ್ಯ ಸಭೆ ಸೇರಿದಂತೆ ರಾಜ್ಯದ ವಿಧಾನ ಸಭೆಗಳು ಇದಕ್ಕೆ ಬೆಂಬಲ ನೀಡಬೇಕು. ಇದರಿಂದ ಪ್ರಪಂಚದಲ್ಲಿ ಮಾದರಿಯಾದ ಪ್ರಜಾಪ್ರಭುತ್ವ ನಮ್ಮದಾಗುತ್ತದೆ ಎಂದು ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಸಂಧರ್ಭದಲ್ಲಿ, ಬಾಳ್ಳುಪೇಟೆ ಗ್ರಾಮ ಪಂಚಾಯತಿ ಸದಸ್ಯೆ ಶೋಭಾ, ಯಸಳೂರು ಗ್ರಾಪಂ ಸದಸ್ಯೆ ಪವಿತ್ರ, ಶಿವಕುಮಾರ್, ಕಿಶನ್, ವನಜಾಕ್ಷಿ, ಉಷಾ ರವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular