Sunday, November 24, 2024
Homeಸುದ್ದಿಗಳುಬಿರಡಹಳ್ಳಿ ಬೆಳೆಗಾರ ಸಂಘದಿಂದ ಜೇನು ಕೃಷಿ ಬಗ್ಗೆ ಮಧು ಮಂಥನ - ದುಂಬಿ...

ಬಿರಡಹಳ್ಳಿ ಬೆಳೆಗಾರ ಸಂಘದಿಂದ ಜೇನು ಕೃಷಿ ಬಗ್ಗೆ ಮಧು ಮಂಥನ – ದುಂಬಿ ಅಭಿಯಾನ.

 

ಸಕಲೇಶಪುರ: ತಾಲೂಕಿನ ಬಿರಡಹಳ್ಳಿ ಗ್ರಾಮ‌ಪಂಚಾಯಿತಿ ಬೆಳೆಗಾರ ಸಂಘದಿಂದ ಗುರುವಾರ ಜೇನು ಕೃಷಿ ಬಗ್ಗೆ ಚಿಂತನ ಮಂಥನ ಕಾರ್ಯಕ್ರಮ ಹಮ್ಮಿ ಕೊಳ್ಳ ಲಾಗಿದೆ.

ಕೆಲಗಳಲೆ ಗ್ರಾಮದಲ್ಲಿರುವ ಮಲ್ನಾಡ್ ಮಿಸ್ಟ್ ಹೋಂ ಸ್ಟೇಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ಜೇನಿನ ವಿಶೇಷ ತಜ್ಞರಾದ ಕೆಂಚಾರೆಡ್ಡಿ ಹಾಗೂ ಜೇನಿನ ನಿರ್ವಹಣೆ ತಜ್ಞ ರಾದ ರಂಜಿತ್ ರವರು ಪಾಲ್ಗೊಳ್ಳಲಿದ್ದಾರೆ.

 

ಆಸಕ್ತರಿಗೆ 50ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು.
ಜೇನು ಕುಟುಂಬ ತೋಟ / ಮನೆಯಲ್ಲೇ ನಿರ್ವಹಣೆ ಸೇವೆ,
ವಿಶೇಷ ಕೊಡುಗೆ ಜೇನು ಪೋಷಕ: ಸಹಕಾರ ಸಂಘದ ವತಿಯಿಂದ 200ಕ್ಕೂ ಹೆಚ್ಚು ಜೇನು ಶೀಷಗಳನ್ನು ಉಚಿತವಾಗಿ ವಿತರಿಸಲಾಗುವುದು. ಶುದ್ದ ಜೇನನ್ನು 1 ಕೆ ಜಿ ಗೆ 700 ರೂ ಗಳಂತೆ ತೆಗೆದುಕೊಳ್ಳಲಾಗುವುದು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವಂತೆ ಕೋರಲಾಗಿದೆ.

RELATED ARTICLES
- Advertisment -spot_img

Most Popular