Thursday, April 3, 2025
Homeಸುದ್ದಿಗಳುರಾಜ್ಯಗ್ರಾಹಕರಿಗೆ ಬಿಗ್ ಶಾಕ್! ಹಾಲಿನ ದರ 4 ರೂ ಏರಿಕೆ!

ಗ್ರಾಹಕರಿಗೆ ಬಿಗ್ ಶಾಕ್! ಹಾಲಿನ ದರ 4 ರೂ ಏರಿಕೆ!

ಗ್ರಾಹಕರಿಗೆ ಬಿಗ್ ಶಾಕ್! ಹಾಲಿನ ದರ 4 ರೂ ಏರಿಕೆ!

ಬೆಂಗಳೂರು: ಇತ್ತೀಚೆಗೆ ಅಗತ್ಯ ವಸ್ತುಗಳ ದರ ಏರಿಕೆಯ ಟ್ರೆಂಡ್ ಶುರುವಾಗಿದೆ. ಬಸ್, ಮೆಟ್ರೋ ದರ ಏರಿಕೆಯ ನಂತರ ಈಗ ಹಾಲಿನ ದರ ಏರಿಕೆಯಾಗಿದೆ.

ಇತ್ತೀಚೆಗಷ್ಟೇ ಹಾಲಿನ ದರ ಏರಿಕೆಯಾಗುವ ಕುರಿತು ಚರ್ಚೆಗಳು ನಡೆದಿದ್ದವು. ಈಗ ದರ ಏರಿಕೆ ಮಾಡಿ ಸರ್ಕಾರ ಶಾಕ್ ಕೊಟ್ಟಿದೆ.

ಪ್ರತಿ ಲೀಟರ್‌ ನಂದಿನ ಹಾಲಿನ ದರ 4 ರೂ. ಹೆಚ್ಚಳ ಮಾಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳುವಂತಾಗಿದೆ.

RELATED ARTICLES
- Advertisment -spot_img

Most Popular