Sunday, November 24, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ ಪಟ್ಟಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಪುರಸಭೆ ಅಡ್ಡಿ: ವೀರಶೈವ ಸಮಾಜದ ಸದಸ್ಯರಿಂದ ತೀವ್ರ ಆಕ್ರೋಶ.

ಸಕಲೇಶಪುರ ಪಟ್ಟಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಪುರಸಭೆ ಅಡ್ಡಿ: ವೀರಶೈವ ಸಮಾಜದ ಸದಸ್ಯರಿಂದ ತೀವ್ರ ಆಕ್ರೋಶ.

ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಪುರಸಭೆ ಅಡ್ಡಿ: ವೀರಶೈವ ಸಮಾಜದ ಸದಸ್ಯರಿಂದ ತೀವ್ರ ಆಕ್ರೋಶ.

ಸಕಲೇಶಪುರ: ಪಟ್ಟಣದ ಬಿ.ಎಮ್ ರಸ್ತೆ ಸಮೀಪ ಬಹು ನಿರೀಕ್ಷಿತ ಬಸವೇಶ್ವರ ಪುತ್ತಳಿ ನಿರ್ಮಾಣಕ್ಕೆ ಪುರಸಭೆಯವರ ಅಡ್ಡಿಗೆ ಮಲೆನಾಡು ವೀರಶೈವ ಸಮಾಜದ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದ ಘಟನೆ ಬುಧವಾರ ಸಂಜೆ ಪಟ್ಟಣದಲ್ಲಿ ನಡೆಯಿತು.

1995 ರಿಂದ ವೀರಶೈವ ಸಮಾಜ ಬಸವೇಶ್ವರ ರಸ್ತೆ ಆರಂಭದಲ್ಲಿ ಅಶ್ವರೂಡ ಬಸವೇಶ್ವರ ಪುತ್ತಳಿ ನಿರ್ಮಾಣಕ್ಕೆ ಪ್ರಯತ್ನ ಆರಂಭಿಸಿತ್ತು. ಹಂತ ಹಂತವಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಒಪ್ಪಿಗೆ ಪಡೆಯಲು ಯಶಸ್ವಿಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಏಕಾಏಕಿ ತಾಲೂಕು ಆಡಳಿತ ಹಾಗೂ ಪುರಸಭೆ ಪುತ್ತಳಿ ನಿರ್ಮಾಣದ ವಿಚಾರವಾಗಿ ಮಲೆನಾಡು ವೀರಶೈವ ಸಮಾಜಕ್ಕೆ ನೋಟಿಸ್ ನೀಡಿದ್ದರು. ಇದಕ್ಕೆ ದಾಖಲೆ ಉತ್ತರ ನೀಡಿರುವ ಮಲೆನಾಡು ವೀರಶೈವ ಸಮಾಜದ ಮುಖಂಡರು ಪ್ರತಿಮೆ ನಿರ್ಮಾಣ ಕಾರ್ಯವನ್ನು ಮುಂದುವರೆಸಿದ್ದರು. ಆದರೆ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿರುವ ಉಪವಿಭಾಗಾಧಿಕಾರಿ ಇಂದು ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕೆಲಸವನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದರು ಆದರೆ ತದನಂತರ ಪುರಸಭಾ ಮುಖ್ಯಾಧಿಕಾರಿ ನಿರ್ಮಾಣ ಹಂತದ ಕಟ್ಟಡವನ್ನು ನೆಲಸಮ ಮಾಡಲು ಸ್ಥಳಕ್ಕೆ ಜೆಸಿಬಿ ಯಂತ್ರವನ್ನು ಕಳುಹಿಸಿದ್ದರು. ಈ ವಿಚಾರ ತಿಳಿದು ಮಲೆನಾಡು ವೀರಶೈವ ಸಮಾಜದವರು ತೆರವು ಕಾರ್ಯಚರಣೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿ ಪುರಸಭೆ ಮುಖ್ಯ ಅಧಿಕಾರಿಯ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದೇವರಾಜ್ ಮಾತನಾಡಿ,ಮೂರು ದಶಕ ಹಿಂದೆ ನಮ್ಮ ಸಮಾಜದ ಹೆಸರಿಗೆ ಮಂಜುರಾಗಿದ್ದು ಆರ್ಥಿಕ ಸಮಸ್ಯೆಯಿಂದ ಪ್ರತಿ ನಿರ್ಮಾಣ ಕಾರ್ಯ ಸಾಧ್ಯವಾಗಿರಲಿಲ್ಲ. ಸದ್ಯ ಸಮಾಜ ಸೇವಕರೊಬ್ಬರ ನೆರವಿನಿಂದ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅಂಬೇಡ್ಕರ್ ಬುದ್ಧ ಬಸವ ಅಂಬೇಡ್ಕರ್ ಸೇರಿದಂತೆ ಎಲ್ಲಾ ಸಮುದಾಯದ ಆದರ್ಶ ಪುರುಷರಾಗಿದ್ದವರು. ಆದರೆ ಇಂಥ ಮಹಾನ್ ಪುರುಷರ ಪ್ರತಿಮೆ ನಿರ್ಮಾಣಕ್ಕೆ ಅಡಚಣೆ ಮಾಡುವುದು ಸರಿಯಲ್ಲ ಆದರೆ ಪುರಸಭೆಯವರು ಏಕಾಏಕಿ ಕಾಮಗಾರಿ ತಡೆದಿರುವುದು ಸರಿಯಾದ ಕ್ರಮವಲ್ಲ ಎಂದು ಪುರಸಭಾ ಅಧಿಕಾರಿಗಳ ನೆಡೆಗೆ ಆಕ್ರೋಶ ವ್ಯಕ್ತಪಡಿಸಿದರು.


ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಯಡೇಹಳ್ಳಿ ಆರ್ ಮಂಜುನಾಥ್ ಮಾತನಾಡಿ, 30 ವರ್ಷಗಳ ಹಿಂದೆಯೇ ವೀರಶೈವ ಸಮಾಜಕ್ಕೆ ನಿಗದಿಯಾಗಿದ್ದು ಸ್ಥಳದ ಮಾಹಿತಿಯ ಕೊರತೆ ಅಧಿಕಾರಿಗಳಿಗೆ ಇದೆ. ಹಾಗಾಗಿ ಬಸವೇಶ್ವರ ಪ್ರತಿಮೆ ನಿರ್ಮಾಣದ ಕಾಮಗಾರಿಗೆ ಅಡ್ಡಿಪಡಿಸುತ್ತಿರುವುದು ತರವಲ್ಲ, ಬಸವೇಶ್ವರ ಪ್ರತಿಮೆ ನಿರ್ಮಾಣದ ನಿಗದಿಯ ಬಗ್ಗೆ ಜಿಲ್ಲಾಡಳಿತ ತಾಲೂಕ ಆಡಳಿತ ಹಾಗೂ ಪುರಸಭೆಯವರಿಗೆ ಮಾಹಿತಿ ಇದ್ದು ಈ ವಿಚಾರವಾಗಿ 10 ಬಾರಿ ದಾಖಲಾತಿಗಳನ್ನ ಅಧಿಕಾರಿಗಳಿಗೆ ನೀಡಿದ್ದೇವೆ ಆದರೂ ಸಹ ಕಾಮಗಾರಿಗೆ ಅಡ್ಡಿಪಡಿಸುತ್ತಿರುವುದನ್ನು ಖಂಡನೀಯ ಎಂದರು.

ಈ ಸಂದರ್ಭದಲ್ಲಿ ಮಲೆನಾಡು ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಧರ್ಮಪ್ಪ,ವೀರಶೈವ ಯುವ ವೇದಿಕೆ ಅಧ್ಯಕ್ಷ ಶಶಿಕುಮಾರ್ ಸಮಾಜದ ಮುಖಂಡರಾದ, ಹುರುಡಿ ಅರುಣ್ ಕುಮಾರ್, ನರೇಶ್, ದಿನೇಶ್, ಪುನೀತ್, ಭಾಸ್ಕರ್,ಸಾಗರ್, ಸಂಗಪ್ಪ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular