ಸಕಲೇಶಪುರ: ತಾಲ್ಲೂಕು, ಮಲೆನಾಡು ಪ್ರದೇಶವಾಗಿದ್ದು, ತಾಲ್ಲೂಕಿನಾಧ್ಯಂತ ಇರುವ ಕಾಫಿ ತೋಟಗಳಲ್ಲಿ ಮತ್ತು ಕಾಡಂಚುಗಳಲ್ಲಿ ಹಲವಾರು ಹೋಂ ಸ್ಟೇ ರೆಸಾರ್ಟ್‌ಗಳಿದ್ದು, ಈಗಾಗಲೇ ಬೆಂಗಳೂರು ಮತ್ತು ಬೇರೆ ಕಡೆಗಳ ಪ್ರವಾಸಿಗರು, 2023ನೇ ವರ್ಷಾಚರಣೆಯ ಸಲುವಾಗಿ, ದಿನಾಂಕ 31-12-2022ರಂದು ಸಕಲೇಶಪುರ ತಾಲ್ಲೂಕಿನಾಧ್ಯಂತ ಇರುವ ಹೋಂ ಸ್ಟೇ ರೆಸಾರ್ಟ್‌ಗಳಲ್ಲಿ ಯಥೇಚ್ಛವಾಗಿ ಉಳಿದುಕೊಳ್ಳಲು ತಯಾರಿ ನಡೆಸಿರುತ್ತಾರೆ. ಪ್ರವಾಸಿಗರು ವರ್ಷಾಚರಣೆ ನಡೆಸಲು ನಮ್ಮ ಅಡ್ಡಿ ಇರುವುದಿಲ್ಲ. ಆದರೆ ವರ್ಷಾಚರಣೆಯ ನೆಪದಲ್ಲಿ ಪ್ರವಾಸಿಗರು ಮಧ್ಯಪಾನ ಮಾಡಿ. ಅತಿಯಾದ ಶಬ್ದಗಳಿಗಾಗಿ ಡಿ.ಜೆ.ಗಳನ್ನು ಹಾಕಿಕೊಂಡು ಕುಣಿಯುವುದು ಸರಿಯಲ್ಲ, ಈ ಡಿ.ಜೆಗಳಿಂದ ಶಬ್ದವು ಸುತ್ತಮುತ್ತಲಿನ 3-4 ಕಿ.ಮೀ.ವರೆಗೆ ಭಯ ಹುಟ್ಟಿಸುವ ರೀತಿಯಲ್ಲಿ ಬರುವುದರಿಂದ, ಕಾಡಂಚಿನಲ್ಲಿ ಓಡಾಡುವ ಕಾಡಾನೆಗಳು, ಚಿರತೆ, ಕಾಡು ಹಂದಿಗಳು ಹಾಗೂ ಇತರೆ ಕಾಡುಪ್ರಾಣಿಗಳು ದಿಕ್ಕೆಟ್ಟು, ಗ್ರಾಮಗಳತ್ತ ಧಾವಿಸಿ, ಬೇಕಾಬಿಟ್ಟಿ ಓಡಾಡುವುದರಿಂದ, ಗ್ರಾಮಸ್ಥರು, ಕಾರ್ಮಿಕರ ಕಾಡುಪ್ರಾಣಿಗೆ ಸಿಲುಕಿ ಸಾವಿಗೀಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಸಕಲೇಶಪುರ ತಾಲ್ಲೂಕಿನಾದ್ಯಂತ ಇರುವ ಹೋಮ್ ಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಡಿ.ಜೆ. ಬಳಸದಂತೆ ಆದೇಶ ಹೊರಡಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್ ಶೆಟ್ಟ ಬಣದ) ವತಿಯಿಂದ ಒತ್ತಾಯಿಸುತ್ತೇವೆ ಎಂದು ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ರವರಿಗೆ ಮನವಿ ಸಲ್ಲಿಸಲಾಯಿತು. ಒಂದು ವೇಳೆ ಈ ಸಂದರ್ಭದಲ್ಲಿ ಡಿ.ಜೆ. ಬಳಸಿ, ಕಾಡುಪ್ರಾಣಿಗಳು ದಿಕ್ಕೆಟ್ಟು ಓಡಾಡಿ, ಸಾರ್ವಜನಿಕರು ಸಾವಿಗೀಡಾದಲ್ಲಿ. ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್‌ಶೆಟ್ಟ ಬಣ)ಯ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗಿರುತ್ತದೆ. ಇದಕ್ಕೆ ಮೀರಿ, ಹೋಮ್‌ಸ್ಟೇ, ರೆಸಾರ್ಟ್‌ಗಳಲ್ಲಿ ಡಿ.ಜೆ. ಬಳಸಿದ್ದು ಗೊತ್ತಾದರೆ, ನಮ್ಮ ಸಂಘಟನೆಯ ಸದಸ್ಯರುಗಳೇ ರೆಸಾರ್ಟ್, ಹೋಮ್ ಸ್ಟೇ ಮಾಲೀಕರ ಗಮನಕ್ಕೆ ತರುವುದರ ಮೂಲಕ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದುದರಿಂದ ತಾವುಗಳು ದಿನಾಂಕ 31.12.2022ರಂದು, ನೂತನ ವರ್ಷಾಚಣಿಯ ಸಲುವಾಗಿ, ಹೋಮ್ ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಭಾರಿ ಶಬ್ದದ ಡಿ.ಜೆ.ಗಳನ್ನು ಬಳಸದಂತೆ ತಡೆಯುವಂತೆ ಆಗ್ರಹಿಸುತ್ತೇವೆ ಎಂದು ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ, ಬೆಳಗೋಡು ಹೋಬಳಿ ಗೌರವ ಅಧ್ಯಕ್ಷ ಬಸವರಾಜ್ ಮತ್ತಿತರರು ಹಾಜರಿದ್ದರು.