ಬಾಳ್ಳುಪೇಟೆ ನಲಪಾಡ್ ಕಾಫಿ ಎಸ್ಟೇಟ್ ನಲ್ಲಿ ಬೀಡು ಬಿಟ್ಟ 12 ಕಾಡಾನೆಗಳು: ಅಪಾರ ಪ್ರಮಾಣದ ಕಾಫಿ ಗಿಡಗಳು ನಾಶ.
ಸಕಲೇಶಪುರ :- ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು ಬಾಳ್ಳುಪೇಟೆ ಸಮೀಪದ ಮಡ್ಡಿನಕೆರೆ ಗ್ರಾಮದ ಬಳಿವಿರುವ ಬೆಂಗಳೂರು ಶಾಂತಿ ನಗರ ಶಾಸಕ ಹ್ಯಾರಿಸ್ ರವರ ಕಾಫಿ ತೋಟದಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ.
ಸುಮಾರು 12 ಕ್ಕೂ ಹೆಚ್ಚುವಿರುವ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲೇ ಠಿಕಾಣಿ ಹೂಡಿದ್ದು ಅಪಾರ ಪ್ರಮಾಣದ ಕಾಫಿ ಗಿಡಗಳನ್ನು ತುಳಿದು ಹಾಕಿವಿ.
ಇಲ್ಲಿನ ಹೊಸಗದ್ದೆ, ಜಮ್ಮನಹಳ್ಳಿ, ಬಂದಿಹಳ್ಳಿ, ಹಳೆಕೆರೆ, ಹೊಸಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕಾಫಿ ತೋಟಗಳಲ್ಲಿ ಕಾಫಿ ಹಣ್ಣು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಾಫಿ ತೋಟದ ಮಾಲೀಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.