ಬಾಳ್ಳುಪೇಟೆ : 75 ವರ್ಷದ ವೃದ್ದೆ ಆತ್ಮಹತ್ಯೆಗೆ ಶರಣು…?
ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆಯ ಇಂದಿರಾ ನಗರದ ವೃದ್ದೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ಮೀನು ವ್ಯಾಪಾರಿಯಾಗಿದ್ದ ರಾಜು ರವರ ತಾಯಿ ಲಕ್ಷ್ಮಮ್ಮ(75) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಮನೆಯಿಂದ ಸ್ವಲ್ಪ ದೂರದಲ್ಲಿರುವ ಬನವಾಸೆ ಗ್ರಾಮದ ನವೀನ್ ಎಂಬುವವರ ಕಾಫಿ ತೋಟದಲ್ಲಿ ಬಿದ್ದಿದ್ದ ಮರಕ್ಕೆ ಹಗ್ಗ ಬಿಗಿದುಕೊಂಡಿದ್ದಾರೆ. ನಂತರ ಹಗ್ಗ ತುಂಡಾಗಿ ಕಾಫಿ ಗಿಡದ ಮರೆಯಲ್ಲಿ ವೃದ್ದೆಯ ಪತ್ತೆಯಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಸಾರ್ವಜನಿಕ ಕ್ರಾಪರ್ಡ್ ಆಸ್ಪತ್ರೆಗೆ ಸಾಗಿಸಿದ್ದಾರೆ.