Saturday, November 23, 2024
Homeಸುದ್ದಿಗಳುಸಕಲೇಶಪುರಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕ‌ರ್ ರವರ ಭಾವಚಿತ್ರಕ್ಕೆ ಅವಮಾನ; ಸಂವಿಧಾನ ಸಂರಕ್ಷಣಾ ಜಾಗೃತಿ ವೇದಿಕೆ,...

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕ‌ರ್ ರವರ ಭಾವಚಿತ್ರಕ್ಕೆ ಅವಮಾನ; ಸಂವಿಧಾನ ಸಂರಕ್ಷಣಾ ಜಾಗೃತಿ ವೇದಿಕೆ, ದಲಿತಪರ ಸಂಘಟನೆಗಳ ಒಕ್ಕೂಟ, ಜನಪರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ

ಸಕಲೇಶಪುರ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕ‌ರ್ ರವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂವಿಧಾನ ಸಂರಕ್ಷಣಾ ಜಾಗೃತಿ ವೇದಿಕೆ, ದಲಿತಪರ ಸಂಘಟನೆಗಳ ಒಕ್ಕೂಟ, ಜನಪರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲರಾದ ವೇಣು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದಲ್ಲಿ ನಡೆದ ಬಿ.ಜೆ.ಪಿ.ಯವರ ವಿಜಯ ಸಂಕಲ್ಪ ಯಾತ್ರೆಯ ಪ್ರಚಾರದ ಅಂಗವಾಗಿ ಬಿ.ಜೆ.ಪಿ.ಯ ನಾಯಕರುಗಳ ಬ್ಯಾನರ್ ಮತ್ತು ಕಟೌಟ್ ಅಳವಡಿಸುವ ಸಂದರ್ಭದಲ್ಲಿ “ಅಪೋಲೋ ಫಾರ್ಮಸಿಯ ಮುಂಭಾಗ ವಿದ್ಯುತ್‌ ಕಂಬದಲ್ಲಿ ಡಾ. ಬಿ.ಆರ್. ಅಂಬೇಡ್ಕ‌ರ್ ರವರ ಭಾವಚಿತ್ರದ ಮೇಲೆ ಮುಖ್ಯಮಂತ್ರಿಗಳ ಪಾದರಕ್ಷೆಯನ್ನು ಅಂಬೇಡ್ಕ‌ರವರ ತಲೆಯ ಮೇಲೆ ಬರುವಂತೆ ಅಳವಡಿಸಿರುವುದು ಸಾಮಾಜಿಕ ಜಾಲಾತಾಣಗಳಲ್ಲಿ ಕಂಡು ಬಂದಿರುತ್ತದೆ. ಬಿ.ಜೆ.ಪಿ ಕಾರ್ಯಕರ್ತರು ಎಸಗಿರುವ ಈ ಕೃತ್ಯದಿಂದ ಅಸಂಖ್ಯಾತ ಭಾರತೀಯರ ಭಾವನೆಗೆ ನೊವುಂಟು ಮಾಡಿದೆ ಎಂದರು. ಸಂವಿಧಾನ ಶಿಲ್ಪಿಗೆ ಅವಮಾನಿಸುವ ಮೂಲಕ ದೇಶಕ್ಕೆ ಅಗೌರವ ತಂದಿರುತ್ತಾರೆ. ಬಿಜೆ.ಪಿ.ಯವರ ಈ ಕೃತ್ಯ ನಮ್ಮ ಮತ್ತು ನಮ್ಮ ಸಂಘಟನೆಗಳ ಭಾವನೆಗೆ ಧಕ್ಕೆ ತಂದಿದೆ ಈ ಕೃತ್ಯವನ್ನು ಮತ್ತು ಗೋಣಿಕೊಪ್ಪಲಿನ ಬಿ ಜೆ.ಪಿ.ವಿಜಯ ಸಂಕಲ್ಪಯಾತ್ರೆಯ ಕಾರ್ಯಕ್ರಮದ ಆಯೋಜಕರು ಬಿ.ಜೆ.ಪಿ. ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಮಾಡಿರುತ್ತಾರೆ. ಈ ಕೃತ್ಯ ದೇಶದ್ರೋಹದ ಕೃತ್ಯ ಹಾಗೂ ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿರುತ್ತದೆ. ಘಟನೆ ನಡೆದು ಒಂದು ವಾರಗಳಾಗಿದ್ದು, ಅಲ್ಲಿಯ ಸ್ಥಳೀಯರು ದೂರು ನೀಡಿದ್ದರೂ ಸಹ ಯಾವುದೇ ತನಿಖೆ ಮಾಡದೆ ಎಫ್.ಐ.ಆರ್. ದಾಖಲಿಸದೆ, ನಿರ್ಲಕ್ಷ್ಯ ತೋರಿರುತ್ತಾರೆ. ಈಗಾಗಲೇ ಅನೇಕ ಪ್ರತಿಭಟನೆಗಳು ನಡೆಯುತ್ತಿದ್ದರೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ಕೂಡಲೆ ತಪ್ಪಿತಸ್ಥರ ವಿರುದ್ದ ರಾಷ್ಟ್ರದ್ರೋಹ, ಜಾತಿ ನಿಂದನೆ ಕೇಸು ದಾಖಲಿಸಬೇಕೆಂದು ಒತ್ತಾಯಿಸಿ ಉಪವಿಭಾಗಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೆನ್ನಲಿ ಶಾಂತ್‌ರಾಜ್, ಕೊಮಾರಯ್ಯ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

RELATED ARTICLES
- Advertisment -spot_img

Most Popular