Saturday, November 23, 2024
Homeಸುದ್ದಿಗಳುಸಕಲೇಶಪುರಕೃಷಿ ಮೇಳ - 2022 ಕಾರ್ಯಕ್ರಮಕ್ಕೆ ತೆರಳಲು ಸಕಲೇಶಪುರ ತಾಲೂಕಿನ ರೈತರಿಗೆ ಬಸ್ ಗಳ ವ್ಯವಸ್ಥೆ.

ಕೃಷಿ ಮೇಳ – 2022 ಕಾರ್ಯಕ್ರಮಕ್ಕೆ ತೆರಳಲು ಸಕಲೇಶಪುರ ತಾಲೂಕಿನ ರೈತರಿಗೆ ಬಸ್ ಗಳ ವ್ಯವಸ್ಥೆ.

ಕೃಷಿ ಮೇಳ – 2022ಕ್ಕೆ ತೆರಳಲು ತಾಲೂಕಿನ ರೈತರಿಗೆ ಬಸ್ ಗಳ ವ್ಯವಸ್ಥೆ.

ಕೃಷಿ ಮೇಳ 2022

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ ಬೆಂಗಳೂರು ಇವರು ದಿನಾಂಕ 03/11/2022 ರಿಂದ 06/11/2022 ರವರೆಗೆ, ಕೃಷಿ ಮೇಳ-2022 ನ್ನು ಆಯೋಜಿಸಿರುತ್ತಾರೆ. ಸದರಿ ಕೃಷಿ ಮೇಳಕ್ಕೆ ಸಕಲೇಶಪುರ ತಾಲ್ಲೂಕಿನ ರೈತರುಗಳು ಭೇಟಿ ನೀಡಿ ಕೃಷಿಯಲ್ಲಿ ನೂತನ ತಾಂತ್ರಿಕತೆಗಳ ಬಗ್ಗೆ ಹಾಗೂ ಆವಿಷ್ಕಾರಗಳ ಬಗ್ಗೆ ಮಾಹಿಗಳನ್ನು ಪಡೆಯಲು ಅನುಕೂಲವಾಗುವಂತೆ ಕೃಷಿ ಇಲಾಖೆ, ಸಕಲೇಶಪುರ ವತಿಯಿಂದ, ದಿನಾಂಕ: 05/11/2022 ರಂದು ತಾಲ್ಲೂಕಿನಿಂದ ಪ್ರತಿ ಹೋಬಳಿಗೆ 50 ಜನ ರೈತರಂತೆ ಒಟ್ಟು 250 ಜನ ರೈತರುಗಳನ್ನು ಜಿ.ಕೆ.ವಿ.ಕೆ ಬೆಂಗಳೂರಿನಲ್ಲಿ ನಡೆಯುವ ಕೃಷಿ ಮೇಳಕ್ಕೆ ಕರೆದುಕೊಂಡು ಹೋಗಲು ಪ್ರತಿ ಹೋಬಳಿಗೆ ಒಂದರಂತೆ ಒಟ್ಟು 05 KSRTC ಬಸ್ ವ್ಯವಸ್ಥೆ ಮಾಡಲಾಗಿರುತ್ತದೆ. ಆದುದರಿಂದ ಆಸಕ್ತ ರೈತ ಬಾಂಧವರು ದಿನಾಂಕ: 03/11/2022 ರೊಳಗೆ ತಮ್ಮ ವ್ಯಾಪ್ತಿಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ದೂರವಾಣಿ ಸಂಖ್ಯೆ, ಪಹಣಿ ಹಾಗೂ ಆಧಾರ್ ಪ್ರತಿಯೊಂದಿಗೆ ಭೇಟಿ ನೀಡಿ ನೊಂದಣಿ ಮಾಡಿಕೊಳ್ಳಲು ಕೋರಲಾಗಿದೆ. ಪ್ರಥಮವಾಗಿ ನೊಂದಣಿ ಮಾಡಿಸಿದ ರೈತರಿಗೆ ಆದ್ಯತೆಯನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು/ ಸಹಾಯಕ ಕೃಷಿ ಅಧಿಕಾರಿಗಳು, ಅಥವಾ ಸಹಾಯಕ ಕೃಷಿ ನಿರ್ದೇಶಕರು, ಸಕಲೇಶಪುರ, ರವರನ್ನು ಸಂಪರ್ಕಿಸಲು ಕೋರಿದೆ.

ಸಂಪಕಿಸಬೇಕಾದ ಅಧಿಕಾರಿಗಳು

1) ಕಸಬಾ ಹೋಬಳಿ, ಬೆಳಗೋಡು ಹೋಬಳಿ ಹರೀಶ್ -8277929292

2) ಹೆತ್ತೂರು ಹೋಬಳಿ, ಯಸಳೂರು ಹೋಬಳಿ – ಶ್ರೀ ಕೇಶವ ಮೂರ್ತಿ – 8277929293

3) ಹಾನುಬಾಳು ಹೋಬಳಿ ಶ್ರೀ ಚೆಲುವರಂಗಪ್ಪ – 8277931772

RELATED ARTICLES
- Advertisment -spot_img

Most Popular