ಸಕಲೇಶಪುರ: ಮಳಲಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘ, ಕಸಬಾ ಹೋಬಳಿ ಬೆಳೆಗಾರರ ಸಂಘದ ಮಾರ್ಗದರ್ಶನದಲ್ಲಿ ಅಡಿಕೆ ಬೆಲೆ ಗಗನಮುಕಿಯತ್ತ, ಬೆಳೆ ಉಳಿಸುವತ್ತ ವಿಜ್ಞಾನಿಗಳ ಚಿತ್ತ ಕುರಿತಾದ ವಿಚಾರ ಸಂಕಿರಣವನ್ನು ಸಕಲೇಶಪುರ ತಾಲೂಕಿನ, ಮಳಲಿ ಗ್ರಾಮದ ಸಮುದಾಯ ಭವನದಲ್ಲಿ ದಿನಾಂಕ 10/11/2022 ರ ಗುರುವಾರ ಬೆಳಗ್ಗೆ 10:30 ಗಂಟೆಗೆ ಹಮ್ಮಿಕೊಂಡಿದೆ. ಅಡಿಕೆ ಕೃಷಿ ಬಗ್ಗೆ ವಿಚಾರ ಸಂಕಿರಣ ಆಯೋಜಿಸಿದ್ದು ತಾವೆಲ್ಲರು ಈ ವಿಚಾರಗೋಷ್ಠಿಯಲ್ಲಿ ಭಾಗವಹಿಸ ಬೇಕಾಗಿ ಕೇಳಿಕೊಳ್ಳುತ್ತೇವೆ. ಈ ವಿಚಾರ ಸಂಕಿರಣಕ್ಕೆ ಭಾ,ಕೃ,ಅ,ಪ-ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕ್ಷೇತ್ರ, ವಿಟ್ಲ ದಿಂದ ವಿಜ್ಞಾನಿಗಳು ಭಾಗವಹಿಸುತ್ತಿದ್ದು ಹಾಗು ಪಿ ಜಿ ಎ ಐ-ಡ್ರೋನ್. ಟೆಕ್ ಕಂಪನಿಯಿಂದ ಅಡಿಕೆ ಬೆಳೆಗೆ ಡ್ರೋನ್‌ನಿಂದ ಸಿಂಪಡನೆ ಮಾಡುವುದು. ಎಸ್ ಜಿ ಎಂ ಟೆಕ್ನಾಲಜೀಸ್ ರಿಂದ ಚಾಲಿ ಅಡಿಕೆ ಸುಲಿಯುವ ಯಂತ್ರ ಪ್ರದರ್ಶನ ಹಾಗು ಕಾರ್ಬನ್ ಫೈಬರ್ ದೋಟಿ ಪ್ರದರ್ಶನ ಮತ್ತು ಇದಕ್ಕೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನದ ಬಗ್ಗೆ ಮಾಹಿತಿ ಕೊಡಲಾಗುವುದು ಎಂದು ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಲೋಹಿತ್ ಕೌಡಹಳ್ಳಿ ತಿಳಿಸಿದ್ದಾರೆ.
ತಾಜಾ ಸುದ್ದಿ