Anand Mamani | ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ್ ಮಾಮನಿ ಇನ್ನಿಲ್ಲ
ವಿಧಾನಸಭೆ ಉಪ ಸಭಾಧ್ಯಕ್ಷ ಅನಂದ್ ಮಾಮನಿ (Anand Mamani) ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.
ಬೆಂಗಳೂರು: ವಿಧಾನಸಭೆ ಉಪ ಸಭಾಧ್ಯಕ್ಷ, ಸವದತ್ತಿಯಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿ (56) (Anand Mamani) ನಿಧನರಾಗಿದ್ದಾರೆ. ಹಲವು ದಿನಗಳಿಂದ ಮಾಮನಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.
ಶನಿವಾರ ರಾತ್ರಿಯೇ ಆನಂದ್ ಮಾಮನಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿ ಜಿಲ್ಲೆ ಸವದತ್ತಿಗೆ ಸಾಗಿಸಲು ತೀರ್ಮಾನಿಸಲಾಗಿದೆ. ಸವದತ್ತಿಯಲ್ಲಿ ಭಾನುವಾರ (ಅ.23) ಅಂತ್ಯಸಂಸ್ಕಾರ ನೆರವೇರಲಿದೆ. ಅಂತ್ಯಸಂಸ್ಕಾರಕ್ಕೂ ಮುನ್ನ ಸವದತ್ತಿಯಲ್ಲಿಯೇ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೂರು ಬಾರಿಯ ಶಾಸಕ ಆನಂದ್ ಮಾಮನಿ ಅವರು ಮೂರು ಬಾರಿ ಶಾಸಕರಾಗಿಆಯ್ಕೆಯಾಗಿದ್ದು, ಜನಪರ ಒಲವು ಹೊಂದಿದ್ದರು. ಅವರು 2020ರಲ್ಲಿ ವಿಧಾನಸಭೆಯ 24ನೇ ಉಪ ಸಭಾಧ್ಯಕ್ಷರಾಗಿ 3 ಆಯ್ಕೆಯಾಗಿದ್ದರು.
ಆನಂದ್ ಮಾಮನಿ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಚೆನ್ನೈನಲ್ಲಿ ಅವರಿಗೆ ಉನ್ನತ ಚಿಕಿತ್ಸೆ ನೀಡಲಾಗಿತ್ತು.ಇತ್ತೀಚೆಗಷ್ಟೇ ವಿಡಿಯೊ ಮೂಲಕ ಹೇಳಿಕೆ ನೀಡಿದ್ದ ಅವರು,”ಶೀಘ್ರದಲ್ಲಿಯೇ ಗುಣಮುಖನಾಗಿ ಜನ ಸೇವೆಗೆ ಹಿಂತಿರುಗುತ್ತೇನೆ” ಎಂದಿದ್ದರು.