Sunday, November 24, 2024
Homeಸುದ್ದಿಗಳುಸಕಲೇಶಪುರಆಲೂರು : ಲೋಕಾಯುಕ್ತ ಅಧಿಕಾರಿಗಳಿಂದ ದೂರು ಅರ್ಜಿ ಸ್ವೀಕಾರ

ಆಲೂರು : ಲೋಕಾಯುಕ್ತ ಅಧಿಕಾರಿಗಳಿಂದ ದೂರು ಅರ್ಜಿ ಸ್ವೀಕಾರ

ಆಲೂರಿನಲ್ಲಿ ಲೋಕಾಯುಕ್ತರ ಅಧಿಕಾರಿಗಳಿಂದ ಅರ್ಜಿ ಸ್ವೀಕಾರ

ಆಲೂರು : ಕರ್ನಾಟಕ ಲೋಕಾಯುಕ್ತ ಹಾಸನ ವಿಭಾಗದ ಎಸ್ಪಿ ಮಲ್ಲಿಕ್ ಅವರ ನೇತೃತ್ವದಲ್ಲಿ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು.

ತಾಲ್ಲೂಕು ಕಚೇರಿಯಲ್ಲಿ ಸಕಾಲಕ್ಕೆ ಸರಿಯಾಗಿ ರೈತರ ಕೆಲಸಗಳಾಗುತ್ತಿಲ್ಲ, ರೈತರು ಸರ್ಕಾರದ ಸವಲತ್ತುಗಳನ್ನು ಪಡೆಯಲು ಜಮೀನಿಗೆ ಸಂಬಂಧಿಸಿದಂತೆ ದಾಖಲೆಗಳಿಗೆ ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಸರಿಯಾದ ದಾಖಲೆಗಳನ್ನು ನೀಡುತ್ತಿಲ್ಲ ಎನ್ನುವ ದೂರುಗಳಿದ್ದು ನಲವತ್ತು ಐವತ್ತು ಕಿ.ಲೋ.ಮೀಟರ್ ಸವೆಸಿ ನೂರಾರು ರೂಗಳನ್ನು ಖರ್ಚು ಮಾಡಿಕೊಂಡು ಪ್ರತಿನಿತ್ಯ ಕಚೇರಿ ಅಲೆಯಬೇಕಾ ಎಂದು ತಹಶಿಲ್ದಾರ್ ಅವರಿಗೆ ತೀವ್ರವಾಗಿ ತರಾಟೆ ತಗೆದುಕೊಂಡರಲ್ಲದೇ ಲೋಕಾಯುಕ್ತರು ಕಚೇರಿಗೆ ಬರುವ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿಲ್ಲ ಸಾರ್ವಜನಿಕರಿಂದ ಕೇವಲ 8 ಅರ್ಜಿಗಳು ಮಾತ್ರ ಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ ಕೆಲವು ರೈತರಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ತಾಲ್ಲೂಕು ತಹಸೀಲ್ದಾರ್ ಹಾಗೂ ಸಿಬ್ಬಂದಿಗಳಿಗೆ ತೀವ್ರವಾಗಿ ತರಾಟೆ ತಗೆದುಕೊಂಡರು

ನಿವೇಶನ ಪಲಾನುಭವಿಗಳಿಂದ ಮನವಿ ಪತ್ರ ಸಲ್ಲಿಕೆ : ಐವತ್ತಕ್ಕೂ ಹೆಚ್ಚು ನಿವೇಶನ ಪಲಾನುಭವಿಗಳು ನಿವೇಶನದ ಸಮಸ್ಯೆ ಬಗೆಹರಿಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿಪತ್ರ ಸಲ್ಲಿಸಿದರು .

ಲೋಕಾಯುಕ್ತ ಎಸ್ಪಿ ಮಲ್ಲಿಕ್ ಮಾತನಾಡಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ದೂರುಗಳನ್ನು ಹೊರತುಪಡಿಸಿ ಸಾರ್ವಜನಿಕರು ಭ್ರಷ್ಟಾಚಾರ ಹಾಗೂ ಲೋಕಾಯುಕ್ತ ಕಾಯ್ದೆ ಬಗ್ಗೆ ಮಾಹಿತಿ ಪಡೆದು ಸರ್ಕಾರಿ ಕಛೇರಿಗಳಲ್ಲಿ ನಡೆಯುತ್ತಿರುವ ವಿಳಂಬ ನೀತಿ,ಸೌಲಭ್ಯ ಅರ್ಹ ಫಲಾನುಭವಿಗಳಿಗೆ ನೀಡಲು ಅನುಸರಿಸುತ್ತಿರುವ ತಾರತಮ್ಯನೀತಿ,ಹಣ ದುರುಪಯೋಗ,ಕಳಪೆ ಕಾಮಗಾರಿ ಬಗ್ಗೆ ದೂರುಗಳನ್ನು ಪ್ರಮಾಣಪತ್ರ 1ಮತ್ತು 2 ರಲ್ಲಿ ಅಫಿಡಿವಿಟ್ ನಲ್ಲಿ ಸಲ್ಲಿಸಬಹುದು ಎಂದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ರವಿಕುಮಾರ್,ತಹಸೀಲ್ದಾರ್ ಸೌಮ್ಯ,ರಾಧಮ್ಮ ಜನಸ್ಪಂಧನ ಸಂಸ್ಥೆ ಹೇಮಂತ್ ಕುಮಾರ್, ಲೋಕಾಯುಕ್ತ ಅಧೀಕ್ಷಕ ಬಾಲು, ಹಾಗೂ ಸಿಬ್ಬಂದಿಗಳು ಇದ್ದರು.

RELATED ARTICLES
- Advertisment -spot_img

Most Popular