Saturday, April 12, 2025
Homeಸುದ್ದಿಗಳುಭೀಕರ ಅಪಘಾತ ಒಂದು ಸಾವು; ಸಾವಿನ ಹೆದ್ದಾರಿಯಾದ ರಾಷ್ಟ್ರೀಯ ಹೆದ್ದಾರಿಯಾದ 75

ಭೀಕರ ಅಪಘಾತ ಒಂದು ಸಾವು; ಸಾವಿನ ಹೆದ್ದಾರಿಯಾದ ರಾಷ್ಟ್ರೀಯ ಹೆದ್ದಾರಿಯಾದ 75

ಆಲೂರು: ತಾಲೂಕಿನ ಪಾಳ್ಯ ಸಮೀಪ  ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಲಾರಿ ಹಾಗೂ ಕಾರೊಂದರ ನಡುವೆ ಅಪಘಾತ ಸಂಭವಿಸಿ  ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಹಾಸನ ನೊಂದಾಯಿತ ವಾಹನದಲ್ಲಿದ್ದ ಮಹಿಳೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ.
 ಬೆಂಗಳೂರು ಕಡೆಗೆ ಸಾಗುತ್ತಿದ್ದ ಕಿಯಾ ಕಾರಿಗೆ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.
 ಕಳೆದ ಎಂಟು ವರ್ಷದಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದರು ಯಾವುದೆ ಪ್ರಯೋಜನವಾಗುತ್ತಿಲ್ಲ.. ಗುತ್ತಿಗೆದಾರ ಕಾಮಗಾರಿಗಾಗಿ ಅಲ್ಲಲ್ಲಿ ರಸ್ತೆ ಅಗೆದು ಹಾಕಿರುವುದೇ ನಿತ್ಯ ಅಪಘಾತಕ್ಕೆ ಕಾರಣವಾಗಿದೆ
ಆಲೂರು ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
RELATED ARTICLES
- Advertisment -spot_img

Most Popular