ಆಲೂರು : ಮಡಬಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂತ್ ಗಳಿಗೆ ಬಿಜೆಪಿಯ ನೂತನ ಪದಾಧಿಕಾರಿಗಳ ನೇಮಕ
ಬೂತ್ ಗೆದ್ದರೆ ಪಕ್ಷ ಗೆದ್ದಂತೆ ಶಾಸಕ ಸಿಮೆಂಟ್ ಮಂಜು
ಆಲೂರು : ರಾಜ್ಯದ ಪ್ರತಿಯೊಂದು ಬೂತ್ ಅಧ್ಯಕ್ಷರು ಕೂಡ ಪಕ್ಷದ ಜೀವಾಳ. ಪಕ್ಷದ ಎಲ್ಲ ಬೂತ್‍ಗಳನ್ನು ಬಲಪಡಿಸಲು ಆದ್ಯತೆ ನೀಡುವುದಾಗಿ ಶಾಸಕ ಸಿಮೆಂಟ್ ಮಂಜು ಹೇಳಿದರು.
ಮಂಗಳವಾರ ತಾಲೂಕಿನ ಪಾಳ್ಯ ಹೋಬಳಿ ಮಡಬಲು ಗ್ರಾಮ ಪಂಚಾಯತಿ ವ್ಯಾಪ್ತಿಯಲಿರುವ ಬೂತ್ ಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಮಾತನಾಡಿದರು.
ಪ್ರತಿ ಬೂತ್ ಪ್ರಮುಖ ಮತ್ತು ಪಕ್ಷದ ಜೀವಾಳ ಎಂಬುದು ಹಿಂದಿನ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇಂದಿನ ಕೇಂದ್ರ ಗೃಹ ಸಚಿವರು ಆದ ಅಮಿತ್ ಶಾ, ಇಂದಿನ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಕಲ್ಪನೆ ಮತ್ತು ಚಿಂತನೆಯಾಗಿದೆ. ಅವರ ಚಿಂತನೆಯಂತೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲ ಪಡಿಸಲಾಗುತ್ತಿದೆ.ಪಕ್ಷದ ರಾಷ್ಟ್ರೀಯ ನಾಯಕರು ಬೂತ್ ಅಧ್ಯಕ್ಷರಾಗಿ ಈ ಮಟ್ಟಕ್ಕೆ ಬೆಳೆದುಬಂದಿದ್ದಾರೆ. ಬಿಜೆಪಿ, ರಾಷ್ಟ್ರೀಯ ಅಧ್ಯಕ್ಷರಂತೆ ಬೂತ್ ಅಧ್ಯಕ್ಷರನ್ನೂ ಗೌರವದಿಂದ ಕಾಣುತ್ತದೆ. ಇದೇ ಬಿಜೆಪಿಯ ವಿಶೇಷತೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷೆ ಉಮಾ ರವಿ ಕುಮಾರ್, ಪ್ರದಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ,ಕಾಂತರಾಜ್, ಸಂದೀಪ್, ಹುಲ್ಲಹಳ್ಳಿ ಆನಂದ್ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು, ಬೂತ್ ಮಟ್ಟದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಡಬಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಒಟ್ಟು 7 ಬೂತ್ ಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹಾಗೂ ಸದಸ್ಯರ ವಿವರ ಈ ಕೆಳಕಂಡಂತಿದೆ.
01.ಬೆಳಮೆ ಬೂತ್
ಅಧ್ಯಕ್ಷ :ಸಂಪತ್
ಕಾರ್ಯದರ್ಶಿ: ಬಿ. ಸಿ ದುಷ್ಯಂತ್
02.ಸಂಕಲಾಪುರ
ಅಧ್ಯಕ್ಷ: ವೇದರಾಜು
ಕಾರ್ಯದರ್ಶಿ :ಕೆ. ಪಿ ಹರೀಶ್
03.ಕಾರ್ಜುವಳ್ಳಿ
ಅಧ್ಯಕ್ಷ :ಪ್ರದೀಪ್
ಕಾರ್ಯದರ್ಶಿ :ಕೆ. ಪಿ ಮಲ್ಲೇಶ್
04.ಕಾಮತಿ
ಅಧ್ಯಕ್ಷ :ಪುನೀತ್
ಕಾರ್ಯದರ್ಶಿ : ಮಂಜುನಾಥ್
05.ಬೆಳ್ಳೂರು
ಅಧ್ಯಕ್ಷ :ಬಿ. ಎಸ್ ದೇವರಾಜ್
ಕಾರ್ಯದರ್ಶಿ :ಮಂಜುನಾಥ್
06.ಹೆದ್ದುರ್ಗ
ಅಧ್ಯಕ್ಷ :ನಂದೀಶ್
ಕಾರ್ಯದರ್ಶಿ :ಹರೀಶ್
07.ಮಡಬಲು
ಅಧ್ಯಕ್ಷ:ನಿಜಲಿಂಗಯ್ಯ
ಕಾರ್ಯದರ್ಶಿ : ಮಂಜೇಗೌಡ