Wednesday, November 20, 2024
Homeಸುದ್ದಿಗಳುಸಕಲೇಶಪುರಆರೋಗ್ಯಕ್ಕಾಗಿ ಯೋಗ" ಶಿಬಿರದಲ್ಲಿ "ಮನೆಯೇ ಮಂತ್ರಾಲಯ, ಮನಸೇ ದೇವಾಲಯ" ವಿಶೇಷ ಕಾರ್ಯಕ್ರಮ.

ಆರೋಗ್ಯಕ್ಕಾಗಿ ಯೋಗ” ಶಿಬಿರದಲ್ಲಿ “ಮನೆಯೇ ಮಂತ್ರಾಲಯ, ಮನಸೇ ದೇವಾಲಯ” ವಿಶೇಷ ಕಾರ್ಯಕ್ರಮ.

ಆರೋಗ್ಯಕ್ಕಾಗಿ ಯೋಗ” ಶಿಬಿರದಲ್ಲಿ “ಮನೆಯೇ ಮಂತ್ರಾಲಯ, ಮನಸೇ ದೇವಾಲಯ” ವಿಶೇಷ ಕಾರ್ಯಕ್ರಮ.

ಆಲೂರು ತಾಲೂಕು ಪಾಳ್ಯ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ.

ಆಲೂರು : ತಾಲೂಕು ಲಯನ್ ಸೇವಾ ಸಂಸ್ಥೆ ವತಿಯಿಂದ ಪಾಳ್ಯ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯಕ್ಕಾಗಿ ಯೋಗ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಅಭಿನಂದನೆ ಸಲ್ಲಿಸಲಾಯಿತು.

 ಖ್ಯಾತ ಯೋಗ ಗುರುಗಳಾದ ಚೇತನ್ ಗುರೂಜಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಸನದ ರಾಜೀವ್ ಆಯುರ್ವೇದ ಆಸ್ಪತ್ರೆ ಸಂಸ್ಥೆಯ ಪ್ರಾನ್ಸುಪಾಲರಾದ ಡಾ ನಿತಿನ್ ರವರು ಆರೋಗ್ಯದ ಬಗ್ಗೆ ಹಾಗೂ ಆಯುರ್ವೇದದ ಬಗ್ಗೆ ಮಾಹಿತಿ ನೀಡಿದರು.ಆಕಾಶವಾಣಿ ಹಾಸನ ಇದರ ವಾಚಕರಾದ ಡಾ ವಿಜಯ್ ಅಂಗಡಿಯವರು ಜೇನು ಸಾಕಾಣಿಕೆ ಹಾಗೂ ಜೇನುತುಪ್ಪ ಬಳಸುವುದರಿಂದ ಆಗುವ ಪ್ರಯೋಜನಗಳ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ಒದಗಿಸಿದರು.

ಈ ವೇಳೆ ಕನ್ನಡ ರಾಜ್ಯೋತ್ಸವ ಜಿಲ್ಲಾ ಪುರಸ್ಕಾರ ಪಡೆದ ಕನ್ನಡ ಪರ ಹೋರಾಟಗಾರ,ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿಯಾದ ರಘು ಪಾಳ್ಯ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪುರಸ್ಕಾರ ಪಡೆದ ನಾಗವೇಣಿ ದೇವರಾಜ್ ರವರನ್ನು ಪಾಳ್ಯ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಸಮಾಜ ಸೇವಕರು ಆದ ಎಸ್ ಎನ್ ಪ್ರಕಾಶ್, ಪವಿತ್ರ ಪ್ರಕಾಶ್ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಆಲೂರು ತಾಲೂಕು ಲಯನ್ಸ್ ಟ್ರಸ್ಟ್ ನ ಅಧ್ಯಕ್ಷರು ಆದ ರೇಣುಕಾ ಪ್ರಸಾದ್,ಯೋಗ ಗುರು ಚೇತನ್ ಗುರುಜಿ ಆಲೂರು ಲಯನ್ಸ್ ಇಂಟರ್ನ್ಯಾಷನಲ್ ಕಾರ್ಯದರ್ಶಿ ಪ್ರಥಾಪ್, ಪ್ರಕಾಶ್ ಎಸ್ ಎನ್, ಪ್ರೇಮ ರಮೇಶ್, ನಾಗವೇಣಿ ದೇವರಾಜ್,ರಘುಪಾಳ್ಯ ಕರವೇ, ಸುಧೀಶ್,ದೇವೆಂದ್ರಪ್ಪ ಶಿಕ್ಷಕರು ಹಾಗೂ ಈ ಕಾರ್ಯಕ್ರಮದಲ್ಲಿ ಪಾಳ್ಯದ ಯೋಗ ಶಿಬಿರಾರ್ಥಿಗಳು ಹಾಗೂ ಆಲೂರಿನ ಯೋಗ ಶಿಬಿರಾರ್ಥಿಗಳು ಭಾಗವಹಿಸಿದ್ದರು

RELATED ARTICLES
- Advertisment -spot_img

Most Popular