ಆಲೂರು: ಕ್ಷಯ ರೋಗಿಗಳಿಗೆ ಫುಡ್‌ಕಿಟ್ ವಿತರಿಸಿದ ಶಾಸಕ ಸಿಮೆಂಟ್ ಮಂಜು
ಆಲೂರು : ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಆಯ್ದ ಕ್ಷಯ ರೋಗಿಗಳಿಗೆ ನ್ಯೂಟ್ರಿಷನ್ ಹಾಗೂ ಆಹಾರ ಕಿಟ್‌ಗಳನ್ನು ಶಾಸಕ ಸಿಮೆಂಟ್ ಮಂಜು ವಿತರಿಸಿದರು.
ಮಂಗಳವಾರ ಭಾರತೀಯ ವೈದ್ಯ ಸಂಘ ಮತ್ತು ಭಾರತೀಯ ವೈದ್ಯ ಸಂಘದ ಮಹಿಳಾ ಘಟಕ, ಆಲೂರು ತಾಲೂಕು ಅರೋಗ್ಯ ಅಧಿಕಾರಿಗಳು ವತಿಯಿಂದ ತಾಲೂಕು ಆಸ್ಪತ್ರೆಯ ಹಾಸನಾಂಬ ಸಭಾಂಗಣದಲ್ಲಿ ನೆಡೆದ ವಿಶ್ವ ಕ್ಷಯ ರೋಗ ದಿನಾಚರಣೆಯ ಪ್ರಯುಕ್ತ ಉಚಿತ ಪೋಷಕಾಂಶ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಗಿಗಳಿಗೆ ಮಾತ್ರೆಗಳ ಜತೆ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ.ಕ್ಷಯ ಗುಣಪಡಿಸುವ ರೋಗವಾಗಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ಔಷಧಿಗಳನ್ನು ವೈದ್ಯರ ನಿರ್ದೇಶನದಂತೆ ತೆಗೆದುಕೊಂಡಾಗ ಬೇಗ ಗುಣ ಹೊಂದಲು ಸಾಧ್ಯ. ಕ್ಷಯ ರೋಗದ ಬಗ್ಗೆ ಭಯಪಡುವ ಅವಶ್ಯಕವಿಲ್ಲ.ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ತಾಲೂಕು ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಉಳ್ಳವರು ಕೂಡ ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಸ್ಪತ್ರೆ ಇನ್ನಷ್ಟು ಮೇಲ್ದರ್ಜೆಗೆ ಏರಲಿದೆ ಎಂದ ಅವರು, ಕ್ಷಯ ರೋಗಿಗಳಿಗೆ ಬೇಗ ಚೇತರಿಸಿಕೊಂಡು ಗುಣಮುಖರಾಗುವಂತೆ ಹಾರೈಸಿದರು.ಸಮಾಜದಲ್ಲಿ ಉಳ್ಳವರು ಆಶಕ್ತರ ನೆರವಿಗೆ ಬರಬೇಕು ಈ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಇನ್ನಿತರ ವೈದ್ಯರು ಸಮಾಜಮುಖಿಯಾದ ಕಾರ್ಯ ಮಾಡಿದ್ದಾರೆ ಫುಡ್ ಕಿಟ್, ಮಾತ್ರೆ ಸೇರಿದಂತೆ ಅಗತ್ಯ ಪೌಷ್ಟಿಕಾಂಶದ ವಸ್ತು ಗಳನ್ನು ನೀಡುತ್ತಿರುವುದು ಶ್ಲಾಘನೀಯವಾದುದ್ದು ಎಂದರು.
ತಾಲೂಕು ವೈದ್ಯಾಧಿಕಾರಿ ನಿಸರಾ ಫಾತಿಮಾ ಮಾತನಾಡಿ,ಟಿಬಿ ಕಾಯಿಲೆ ಗುಣಮುಖವಾಗುವ ರೋಗವಾಗಿದೆ. ಪೂರ್ಣ ಚಿಕಿತ್ಸೆ ಮೂಲಕ ಕ್ಷಯ ರೋಗ ದೂರ ಮಾಡಬಹುದು ಎಂದರು.ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಮಾತನಾಡಿ, ಶ್ರೀರಂಗ ಡಾಂಗೆ ಮಾತನಾಡಿ,ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 26% ಜನರು ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ಷಯ ರೋಗಿಯೂ ಸ್ವಲ್ಪ ಚೇತರಿಕೆಗೆ ಕಂಡೊಡನೆ ಚಿಕಿತ್ಸೆಯ ಔಷದಿ ನಿಲ್ಲಿಸಿದರೆ ಮತ್ತೆ ಆರಂಭವಾಗಿತ್ತದೆ.. ಪ್ರಸ್ತುತ ದೇಶದಲ್ಲಿ ವರ್ಷದಲ್ಲಿ 4 ಲಕ್ಷ ಜನರು ಕ್ಷಯ ರೋಗದಿಂದ ಮೃತ ಪಡುತ್ತಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘ ಮಹಿಳಾ ಘಟಕದ ಕಾರ್ಯದರ್ಶಿ ದಿವ್ಯ ಶ್ರೀ, ಖಜಾಂಚಿ ಟಿ. ಎಸ್ ದಿವ್ಯ, ತಹಸೀಲ್ದಾರ್ ಮಲ್ಲಿಕಾರ್ಜುನ್, ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಜಯಪ್ರಕಾಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.