ಆಲೂರು: ಕೆಂಚಮ್ಮನ ಹೊಸಕೋಟೆ: ಕೆಂಚಾಂಬಿಕೆ ದೇವಿ ದರ್ಶನ ಪಡೆದ ಶಾಸಕ ಎಚ್. ಕೆ ಕುಮಾರಸ್ವಾಮಿ.
ಇತಿಹಾಸ ಪ್ರಸಿದ್ದ ಕೆಂಚಾಂಬ ದೇವಿಯ ಜಾತ್ರೆ ಹಿನ್ನೆಲೆಯಲ್ಲಿ ಶಾಸಕ ಎಚ್ ಕೆ ಕುಮಾರಸ್ವಾಮಿ ಪತ್ನಿ ಚಂಚಲ ಕುಮಾರಸ್ವಾಮಿ ಸಮೇತ ದೇವಿಯ ದರ್ಶನ ಪಡೆದರು.
ಜಿಲ್ಲೆಯ ಜನತೆಗೆ ದೇವಿಯ ಅನುಗ್ರಹದಿಂದ ಒಳಿತನ್ನು ಉಂಟುಮಾಡಲಿ ಬೇಡಿದರು.
ದೀಪಾವಳಿಯ ನಂತರದ ಮಂಗಳವಾರ ಸಪ್ತಮಾತೃಕೆಯರು ಒಟ್ಟಾಗುವ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಬೇಕೇ? ಹಾಗಿದ್ದರೆ ಹರಿಹಳ್ಳಿಯ ಕೆಂಚಾಂಬಿಕೆ ಮೂಲ ದೇವಾಲಯಕ್ಕೆ (Kenchamba Temple) ಬನ್ನಿ. ಇಲ್ಲಿ ಬ್ರಾಹ್ಮೀ (ಕೆಂಚಮ್ಮ ಹಿರಿಯ ಸಹೋದರಿ), ಮಾಹೇಶ್ವರೀ, ವೈಷ್ಣವೀ, ಕೌಮಾರಿ (ಹಾಸನಾಂಬಾ ದೇವಸ್ಥಾನ), ವಾರಾಹಿ, ಇಂದ್ರಾಣಿ, ಚಾಮುಂಡಿ (ದೇವೀಗೆರೆ, ಹಾಸನ) ಇವರೆಲ್ಲರ ಸಮಾಗಮ ನೋಡುವುದೇ ಬಲು ಚೆನ್ನ. ಹಾಸನಾಂಬಾ ದರ್ಶನಕ್ಕೆ (Hasanamba Darshan) ತೆರೆಬಿದ್ದ ಮೇಲೆ ಆಲೂರು ತಾಲೂಕಿನ (Alur Taluk) ಹರಿಹಳ್ಳಿಯಲ್ಲಿ ಚಿಕ್ಕ ಜಾತ್ರೆ, ಉತ್ಸವಗಳು (Festivals) ನಡೆಯುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತೆ ದೇವಾಲಯಗಳಿಗೂ (Temple Visit) ಭಕ್ತರೊಟ್ಟಿಗೆ ಪ್ರವಾಸಿಗರು ಆಗಮಿಸುತ್ತಾರೆ.